ಇಂದಿರಾನಗರದಲ್ಲಿರುವ ಪೋಕರ್ಸ್ ಕ್ಲಬ್ ಮೇಲೆ ಅಗಸ್ಟ್ 6 ರಂದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಕ್ಲಬ್‌ನ ಕೆಳ ಮಹಡಿಯಲ್ಲಿ 1.5 ಕೋಟಿ ಹಾಗೂ ಕ್ಲಬ್‌ನ ಮೇಲ್ಮಹಡಿಯಲ್ಲಿ 1 ಕೋಟಿ ರೂಪಾಯಿ ಹಣವನ್ನು ರೈಡ್ ಮಾಡಿ, 180 ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಪ್ರಕರಣದಲ್ಲಿ ಕೇವಲ 8.5 ಲಕ್ಷವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಮೂದಿಸುವ ಮೂಲಕ ಜಪ್ತಿ ಮಾಡಿದ್ದ 2 ಕೋಟಿ ರೂಪಾಯಿ ಹಣವನ್ನು ನುಂಗಿದ್ದಾರೆ.
ಗೃಹ ಸಚಿವರ ಹೇಳಿಕೆ........
ಇಂದಿರಾನಗರದ ಪೋಕರ್ಸ್ ಕ್ಲಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಎರಡು ಕೋಟಿ ಹಣವನ್ನು ಲೂಟಿ ಮಾಡಿರುವ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಹಗರಣ ನಡೆದಿದ್ದೆ ಆದರೆ, ಪೊಲೀಸ್ ಆಯುಕ್ತರು ತನಿಖೆ ಕೈಗೊಳ್ಳುತ್ತಾರೆ. ಪ್ರಕರಣದಲ್ಲಿ ಯಾವುದೇ ಅಧಿಕಾರಿ ಭಾಗಿಯಾಗಿದ್ದರು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.