ದನ ಬೆದರಿಸುವ ಹಬ್ಬದ ಸಂಭ್ರಮ

ಗುರುವಾರ, 8 ನವೆಂಬರ್ 2018 (15:42 IST)
ದನ ಬೆದರಿಸುವ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ದನಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಹಾವೇರಿ ಜಿಲ್ಲೆಯಲ್ಲಿ ಹೋರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಜಿಲ್ಲೆಯಾದ್ಯಂತ ದನ ಬೆದರಿಸುವ ಹಬ್ಬವೆಂದೆ ಪ್ರಖ್ಯಾತಿಯಾಗಿರುವ ಹಬ್ಬ ಇದಾಗಿದ್ದು, ಹೋರಿಗಳನ್ನು ವಿಶಿಷ್ಟ ರೀತಿಯಲ್ಲಿ ಸಿಂಗರಿಸಿ ಅವುಗಳನ್ನು ಓಡಿಸುವ ಮೂಲಕ ಹಬ್ಬವನ್ನು ಆಚರಿಸಲಾಯಿತು. ಈ ಹಬ್ಬ ಇಡೀ ಉತ್ತರ ಕರ್ನಾಟಕದಲ್ಲಿಯೆ ಆಕರ್ಷಣೆಯಾಗಿದೆ.

ಬೇರೆ ಬೇರೆ ರಾಜ್ಯಗಳಿಂದ ಹೋರಿಗಳನ್ನು ಹೆಚ್ಚಿನ ಬೆಲೆಗೆ ಖರೀದಿಸಿ ಸ್ಪರ್ಧೆಗೆ ತಯಾರಿ ಮಾಡಿರುತ್ತಾರೆ. ಇನ್ನೂ ಈ ಹಬ್ಬವನ್ನು ನೋಡಲು ಸಾಕಷ್ಟು ಪ್ರಮಾಣದಲ್ಲಿ ಜನರು ಸೇರಿದ್ದರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ