ಮಕ್ಕಳಿಗಾಗಿ ಚಾಂಪ್ – ಏನಿದರ ವೈಶಿಷ್ಟ್ಯ

ಭಾನುವಾರ, 4 ಆಗಸ್ಟ್ 2019 (18:10 IST)
ಮಕ್ಕಳಿಗಾಗಿ ಚಾಂಪ್ ಎಂಬ ಹೆಸರಿನ ವಿನೂತನ ಕಾರ್ಯಕ್ರಮ ಎಲ್ಲರ ಗಮನ ಸೆಳೆಯುತ್ತಿದೆ.

ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ವಿಜ್ಞಾನದತ್ತ ಆಸಕ್ತಿ ಬೆಳಸುವಲ್ಲಿ ಯಶಸ್ವಿಯಾದರೆ ಮಕ್ಕಳು ವೈದ್ಯಕೀಯ ರಂಗದತ್ತ ಹೆಚ್ಚು ಮುಖ ಮಾಡುತ್ತಾರೆ. ಹೀಗಂತ ನಾರಾಯಣ ಹೃದಯಾಲಯದ ಖ್ಯಾತ ತಜ್ಞ ಡಾ.ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ರು.

ನಾರಾಯಣ ಹೃದಯಾಲಯ, ಬಯೋಕಾನ್ ಹಾಗೂ ಅಗಸ್ತ್ಯ ಪೌoಡೇಷನ್ ಸಹಯೋಗದೊಂದಿದೆ ಮಕ್ಕಳಿಗಾಗಿ ಚಾಂಪ್ ಎಂಬ ಹೆಸರಿನಲ್ಲಿ ವಿಜ್ಞಾನದ ಸಂಚಾರಿ ಪ್ರಯೋಗಾಲಯದ ಉದ್ಘಾಟನೆ ಮಾಡಿ ಮಾತನಾಡಿದ್ರು. ಸರ್ಕಾರಿ ಶಾಲೆಯ ಮಕ್ಕಳಲ್ಲಿ ಇತ್ತೀಚೆಗೆ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ ಕೊರತೆಯಾಗುತ್ತಿದೆ.

ಸಂಚಾರಿ ಪ್ರಯೋಗಾಲಯದ ಮೂಲಕ ವಿಜ್ಞಾದ ಅರಿವು ಮೂಡಿಸಲು ಪ್ರಯತ್ನಿಸುವುದಾಗಿದೆ. ಇನ್ನು ದೇಶದಲ್ಲಿ ಶೇಕಡಾ 60 ರಷ್ಟು ಸಾವು ಸಾಂಕ್ರಾಮಿಕವಲ್ಲದ ರೋಗಗಳಿಂದ ಉಂಟಾಗುತ್ತಿವೆ.

ಇಂತಹ ಪ್ರಕರಣಗಳಲ್ಲಿ ಅಧಿಕ ರಕ್ತದೊತ್ತಡ ಇರುವುದು ಕಂಡು ಬಂದಿದ್ದು ಈ ಹಿನ್ನೆಲೆಯಲ್ಲಿ  ಚಾಂಪ್ಸ್ ಕಾರ್ಯಕ್ರಮದ ಮೂಲಕ 8 ಮತ್ತು 9 ನೇ ತರಗತಿಯ ಮಕ್ಕಳಲ್ಲಿ ರಕ್ತದೊತ್ತಡ ಅಳೆಯುವ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ