ಚಾಮುಂಡೇಶ್ವರಿ ಕೇವಲ ಹಿಂದೂಗಳ ಆಸ್ತಿಯಲ್ಲ: ಡಿಕೆ ಶಿವಕುಮಾರ್

Sampriya

ಮಂಗಳವಾರ, 26 ಆಗಸ್ಟ್ 2025 (17:45 IST)
ಬೆಂಗಳೂರು: ಚಾಮುಂಡೇಶ್ವರಿ ಕೇವಲ ಹಿಂದೂಗಳ ಆಸ್ತಿ ಅಲ್ಲ. ದಸರಾ ಧಾರ್ಮಿಕ ಆಚರಣೆ ಅಲ್ಲ, ಅದು ಸಾಂಸ್ಕೃತಿಕ ಆಚರಣೆ. ದಸರಾವನ್ನು ಬಾನು ಮುಪ್ತಾಕ್‌ ಉದ್ಘಾಟನೆ ತಪ್ಪೇನು ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. ಸ

ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವುದಕ್ಕೆ ಬಿಜೆಪಿ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಚಾಮುಂಡಿ ಬೆಟ್ಟ, ಚಾಮುಂಡೇಶ್ವರಿ ಹಿಂದೂಗಳ ಆಸ್ತಿಯಲ್ಲ. ಎಲ್ಲ ಧರ್ಮದವರು ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗ್ತಾರೆ. ಅದು ಅವರ ನಂಬಿಕೆ. ನಾವು ಮಸೀದಿ, ಚರ್ಚ್‌ಗೆ ಹೋಗ್ತೀವಿ, ಬಸ್ತಿ, ಜೈನ ದೇವಾಲಯ, ಗುರುದ್ವಾರಗೆ ಹೋಗ್ತೀವಿ. ಗುರುದ್ವಾರಕ್ಕೆ ಹೋಗೋದು ತಪ್ಪಿಸೋಕೆ ಅಗುತ್ತಾ? ಹಿಂದೂ ದೇವಾಲಯಕ್ಕೆ ಅವರನ್ನ ಬರೋದು ತಪ್ಪಿಸೋಕೆ ಆಗುತ್ತಾ? ಯಾರ್ ಬೇಕಾದ್ರು ಹೋಗಬಹುದು ಎಂದಿದ್ದಾರೆ.

ಹಿಂದೂಗಳು ಮುಸ್ಲಿಂರಾಗಿ ಮತಂತಾರ ಆಗಿಲ್ವಾ, ಕ್ರಿಶ್ಚಿಯನ್ ಧರ್ಮವನ್ನು ಸ್ವೀಕಾರ ಮಾಡಿಲ್ವ. ಎಷ್ಟೋ ಮುಸ್ಲಿಮರು ಹಿಂದೂ ಸಂಸ್ಕೃತಿಯನ್ನು ಅಭ್ಯಾಸ ಮಾಡಿಲ್ವ, ಹೀಗೇ ಹಲವು ಉದಾಹರಣೆಗಳು ಸಿಗುತ್ತದೆ ಎಂದರು. 

ಈಗ ನಡೆಯುತ್ತಿರುವ ಬೆಳವಣಿಗೆ ರಾಜಕೀಯವಾಗಿದ್ದು, ಯಾಕೆ ಬೆಟ್ಟ ಹತ್ತಬಾರದು? ಯಾಕೆ ಉದ್ಘಾಟನೆ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.

ಅಯೋಧ್ಯೆಗೆ ಹಿಂದುಗಳು ಮಾತ್ರ ಬರಬೇಕು ಅಂತ ಯಾಕೆ ಬೋರ್ಡ್ ಹಾಕಿಲ್ಲ. ಎಲ್ಲಿದೆ ಆ ರೀತಿ.ನಿಮ್ಮ ಸರ್ಕಾರ ಇತ್ತು. ಹಜ್ ಕಮಿಟಿ ಸೇರಿ ಮುಸ್ಲಿಂ ಕಮಿಟಿಗಳನ್ನ ಯಾಕೆ ನೀವು ಮುಚ್ಚಿಲ್ಲ. ಇಡೀ ದೇಶದಲ್ಲಿ ಯಾಕೆ ಮುಚ್ಚೋಕೆ ಆಗಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ನಮ್ಮದು ಜಾತ್ಯಾತೀತ ದೇಶ. ಸಂವಿಧಾನದಲ್ಲಿ ಎಲ್ಲರಿಗೂ ರಕ್ಷಣೆ ಇದೆ. ಎಲ್ಲರಿಗೂ ಸ್ವಾಗತ ಇದೆ. ಮುಸ್ಲಿಂ ಹೆಣ್ಣು, ಹಿಂದೂ ಗಂಡ ಇರುತ್ತಾರೆ. ಅವರ ಮಗ ಏನೂ ಬೇಕಾದ್ರು ಆಚರಣೆ ಮಾಡಬಹುದು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ