ರಾಹುಲ್ ಗಾಂಧಿ ವಾಸ್ತವ್ಯಕ್ಕೆ ನವೀಕರಣಗೊಂಡ ಸರ್ಕ್ಯೂಟ್ ಹೌಸ್

ಮಂಗಳವಾರ, 6 ಫೆಬ್ರವರಿ 2018 (08:59 IST)

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಸ್ತವ್ಯದ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆ ಉದ್ಘಾಟನೆಗೊಂಡಿರುವ ಕೊಪ್ಪಳದ ಕುಕನೂರು ಸರ್ಕ್ಯೂಟ್ ಹೌಸ್ ನವೀಕರಣ ಕೈಗೊಳ್ಳಲಾಗಿದೆ.

ರಾಹುಲ್ ಗಾಂಧಿ ಅವರು ಫೆಬ್ರುವರಿ 10 ರಂದು ವಾಸ್ತವ್ಯ ಹೂಡಲಿರುವ ಕಾರಣಕ್ಕೆ ನವೀಕರಣ ಕಾರ್ಯ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಹಾಗೂ ಸಚಿವರು ಕೂಡ ವಾಸ್ತವ್ಯ ಮಾಡಲಿದ್ದಾರೆ.

ಮೂರು ತಿಂಗಳ ಹಿಂದೆ ಅಳವಡಿಸಿದ್ದ ಸಾಮಾಗ್ರಿಗಳನ್ನು ತೆರವುಗೊಳಿಸಿ ಹೊಸ ಸಾಮಾಗ್ರಿಗಳನ್ನು  ಅಳವಡಿಸಲಾಗಿದೆ. ಸ್ನಾನದ ಗೃಹ ಹಾಗೂ ಶೌಚಾಲಯ ನವೀಕರಣ ಮಾಡಲಾಗಿದೆ. ಎಸಿ ಹಾಗೂ ಕಮೋಡ್ ಅಳವಡಿಕೆ ಮಾಡಲಾಗಿದೆ.

ಲಕ್ಷಾಂತರ ರೂಪಾಯಿ ವೆಚ್ಚಮಾಡಿ ನವೀಕರಣ ಮಾಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ