ಉಪನ್ಯಾಸಕಿಯರು ಕಡ್ಡಾಯ ಸೀರೆ ಉಡುವಂತೆ ಸುತ್ತೋಲೆ

ಬುಧವಾರ, 5 ಜುಲೈ 2017 (19:53 IST)
ಉಪನ್ಯಾಸಕಿಯರು ಕಡ್ಡಾಯವಾಗಿ ಸೀರೆ ಉಡುವಂತೆ ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
 
ಕಾಲೇಜುಗಳಲ್ಲಿ ಉಪನ್ಯಾಸಕಿಯರು ಕಡ್ಡಾಯವಾಗಿ ಸೀರೆ ಉಡಬೇಕು, ಕಾಲೇಜುಗಳಲ್ಲಿ ಮೊಬೈಲ್ ಬಳಸುವುದಕ್ಕೆ ಉಪನ್ಯಾಸಕಿಯರಿಗೆ ನಿಷೇಧ ಹೇರಲಾಗಿದೆ ಎಂದು ಸುತ್ತೋಲೆ ಹೊರಡಿಸಲಾಗಿದೆ. 
 
ನಾಲ್ಕು ತಿಂಗಳುಗಳ ಹಿಂದೆ ಡ್ರೆಸ್ ಕೋಡ್ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ, ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಸುತ್ತೋಲೆ ಕೈ ಬಿಡಲಾಗಿತ್ತು ಎಂದು ಇಲಾಖೆಯ ಮೂಲಗಳು ತಿಳಿಸಿವೆ.
 
ಹಳೆಯ ಆದೇಶಕ್ಕೆ ಮತ್ತೆ ಜೀವ ತಂದ ಶಿಕ್ಷಣ ಇಲಾಖೆ ಉನ್ನತ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿ ತಕ್ಷಣದಿಂದಲೇ ಜಾರಿಗೆ ತರುವಂತೆ ಆದೇಶ ನೀಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ