ನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಯಿಂದ ಸಿಟಿ ರೌಂಡ್ಸ್

ಬುಧವಾರ, 4 ಅಕ್ಟೋಬರ್ 2023 (19:42 IST)
ನಗರದಲ್ಲಿ ಡಿಕೆ ಶಿವಕುಮಾರ್ ಇಂದು ಸಿಟಿ ರೌಂಡ್ ನಡೆಸಿದ್ದು,ಡಿಕೆ ಶಿವಕುಮಾರ್  ಗೆ ಶಾಸಕ ರಿಜ್ವಾನ್ ಹರ್ಷದ್ ಸಾಥ್ ನೀಡಿದ್ದಾರೆ.ನಗರದ ಮಿಲ್ಲರ್ ರಸ್ತೆಯಲ್ಲಿ ಕಾಮಗಾರಿ ಡಿಸಿಎಂ ಡಿಕೆ ಶಿವಕುಮಾರ್ ವೀಕ್ಷಣೆ ಮಾಡಿದ್ದಾರೆ.ಈ ವೇಳೆ ಡಿಕೆ ಶಿವಕುಮಾರ್ ಗೆ ಸಾತ್ ಬಿಬಿಎಂಪಿ ಆಯುಕ್ತ ತುಷಾರ್ ಗಿರೀನಾಥ್ ಸಾಥ್ ನೀಡಿದ್ದಾರೆ.
 
ಡಿಸಿಎಂ ಕಾಟಚಾರದ ಸಿಟಿ ರೌಂಡ್ಸ್ ನಡೆಸಿದ್ದು,ಕೇವಲ ಎರಡೇ ಜಾಗಗಳಿಗೆ ಡಿಸಿಎಂ‌ ಡಿಕೆ ಶಿವಕುಮಾರ್ ವಿಸಿಟ್ ಮಾಡಿದ್ದಾರೆ.ಎರಡೇ ನಿಮಿಷದಲ್ಲಿ ಒಂದೊಂದು ಜಾಗಕ್ಕೆ ವೀಕ್ಷಣೆ ಮಾಡಿ ಸಿಟಿ ರೌಂಡ್ಸ್ ಮುಗಿಸಿ ಡಿಸಿಎಂ ಡಿಕೆಶಿವಕುಮಾರ್ ಹೊರಟಿದ್ದಾರೆ.ವಸಂತನಗರ ರಾಜಕಾಲುವೆ ಹಾಗೂ ಜಯ್ ಮಹಲ್ ರಸ್ತೆ ವಿಭಜನೆ ಕಾಮಗಾರಿ ಮಾತ್ರ ವೀಕ್ಷಣೆ ಮಾಡಿದ್ದಾರೆ.
 
ಸಿಟಿ ರೌಂಡ್ಸ್ ಮುಗಿಸಿದ ಬಳಿಕ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದು,೩೪ ಕಿ.ಮೀ ನಲ್ಲಿ ಟೆಂಡರ್ ಶ್ಯೂರ್ ಕೆಲಸ ನಡಿತಿದೆ.ನಿಂತ ಕಾಮಗಾರಿಗಳು ಆರಂಭ ಮಾಡೋದಕ್ಕೆ ಹೇಳಿದ್ದೇನೆ.ಚರಂಡಿ ಕೆಲಸಗಳನ್ನ ಆರಂಭಿಸಲು ಸೂಚನೆ ನೀಡಿದ್ದೇನೆ.ರಸ್ತೆ ಗುಂಡಿಗಳ ಬಗ್ಗೆ ತಿಳಿಸೋದಕ್ಕೆ ಸಾರ್ವಜನಿಕರಿಗೂ ಅವಕಾಶವಿದೆ.ಗುಂಡಿ ಮುಚ್ಚುವ ಕೆಲಸ ಆಗ್ತಿದೆ.ಅಮೃತನಗರೋತ್ಥನ ಯೋಜನೆಯಡಿ ೫ ಸಾವಿರ ಕೋಟಿ ಅನುದಾನದಲ್ಲಿ ಕೆಲಸಗಳು ಆಗಲಿವೆ.೭ನೇ ತಾರೀಖಿಗೆ ಔಟರ್ ರಿಂಗ್ ರೋಡ್ ನಲ್ಲಿ ವೀಕ್ಷಣೆ ಮಾಡಲಿದ್ದೇನೆ.ಜನಕ್ಕೆ ತೊಂದ್ರೆಯಾಗದಂತೆ ಕೆಲಸ ಮಾಡಬೇಕು.ನಗರದಲ್ಲಿ ರಸ್ತೆಗುಂಡಿಗಳನ್ನ ಮುಚ್ಚೋಕೆ ಹೇಳಿದ್ದೇವೆ.ಪೊಲೀಸರು, ಪಾಲಿಕೆಯವ್ರು ಸೇರಿ ಮುಚ್ಚುವ ಕೆಲಸ ಮಾಡ್ತಾರೆ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ