ಬೀದಿಗೆ ಬಿದ್ದ ಬಡವರ ಬದುಕು: ತೆರವು ಕಾರ್ಯಾಚರಣೆ

ಭಾನುವಾರ, 4 ನವೆಂಬರ್ 2018 (18:13 IST)
ಬಡವ ಬಲ್ಲಿದ ಎನ್ನದೆ ಬೀದಿಗೆ ಬಿಸಾಡಿರುವ ಅರಣ್ಯ ಇಲಾಖೆಯು ತೆರವು ಕಾರ್ಯಾಚರಣೆಯ ಹೆಸರಿನಲ್ಲಿ  ಬೀದಿಗೆ ಬಿದ್ದ ಜನರ ಸ್ಥಿತಿಗತಿಯನ್ನು ನೋಡಲು ನಿಜಕ್ಕೂ ಅಸಾಧ್ಯ ವಾಗಿದೆ

 ಸುಮಾರು ವರ್ಷಗಳಿಂದ ವಾಸವಾಗಿರುವ ಬೋವಿ ಕಾಲೋನಿಯ ಜನರ ಸ್ಥಿತಿ ಇಂದು ಕಷ್ಟವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ನರಸಿಂಹ ರಾಜಪುರ ತಾಲೂಕಿನ ಸಿಂಸೆ ಗ್ರಾಮದ ಭೋವಿ ಕಾಲೊನಿಯ ಜನರು ತಮ್ಮ ಮನೆ ಮಠವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಚಿಕ್ಕದೊಂದು ಸೂರು ಕಟ್ಟಿಕೊಳ್ಳುವ ಆಸೆಯನ್ನು ಪೂರ್ಣಗೊಳಿಸುವ ಮುಂಚೆಯೇ ಅರಣ್ಯ ಇಲಾಖೆಯವರು ತೆರವು ಕಾರ್ಯಾಚರಣೆಯನ್ನು ಕೈಗೊಂಡಿದ್ದರು.

ಈ ಕಾರ್ಯಾಚರಣೆಯಿಂದ ಸುಮಾರು ಹದಿನೈದಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಂತಾಗಿದೆ. ಮನೆ ಮಠ ಕಳೆದುಕೊಂಡ ಇವರ ಸ್ಥಿತಿ ನೋಡಲು ಅಸಾಧ್ಯವಾಗಿದೆ. ಅರಣ್ಯ ಇಲಾಖೆಗೆ ಸಂಬಂಧಪಟ್ಟಂತಹ ಅರಣ್ಯ ಜಾಗದಲ್ಲಿ ಕಟ್ಟಿದ್ದಾರೆ ಎಂಬ ಹಿನ್ನೆಲೆಯಲ್ಲಿ ಈ ತೆರವು ಕಾರ್ಯಾಚರಣೆ ನಡೆದಿದೆ.  


ವೆಬ್ದುನಿಯಾವನ್ನು ಓದಿ