ರೈತರ ಬೆಳೆ ಸಾಲ ಮನ್ನಾ ಒಂದೇ ಕಂತಿನಲ್ಲಿ ಭರಿಸುವುದಾಗಿ ಘೋಷಣೆ ಮಾಡಿದ ಸಿಎಂ

ಶುಕ್ರವಾರ, 4 ಜನವರಿ 2019 (11:24 IST)
ಬೆಂಗಳೂರು : ರೈತರ ಬೆಳೆ ಸಾಲ ಮನ್ನಾ 46 ಸಾವಿರ ಕೋಟಿ ರೂ.ಗಳನ್ನು ಒಂದೇ ಕಂತಿನಲ್ಲಿ ಭರಿಸುವುದಾಗಿ ಘೋಷಣೆ ಮಾಡುವುದರ ಮೂಲಕ ಸಿಎಂ ಕುಮಾರಸ್ವಾಮಿ ರಾಜ್ಯದ ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ.


ರೈತರ ಬೆಳೆ ಸಾಲ ಮನ್ನಾ ಯೋಜನೆಯ ಹಣವನ್ನು 4 ಕಂತುಗಳಲ್ಲಿ 4 ವರ್ಷಗಳ ಅವಧಿಗೆ ಬ್ಯಾಂಕ್ ಗಳಿಗೆ ಭರಿಸುವುದಾಗಿ ಹೇಳಲಾಗಿತ್ತು. ಆದರೆ ಇದೀಗ ಈ ನಿರ್ಧಾರದಿಂದ ಹಿಂದೆ ಸರಿದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಒಂದೇ ಕಂತಿನಲ್ಲಿ ಭರಿಸುವುದಾಗಿ ಹೇಳಿದ್ದಾರೆ.


ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದ ಆವರಣದಲ್ಲಿ ನಡೆದ ಪಕ್ಷದ ಮುಖಂಡರ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಿಎಂ, ಟೀಕಾಕಾರರು ರೈತರಲ್ಲಿ ಅವಿಶ್ವಾಸ ಮೂಡಿಸುವ ಹುನ್ನಾರ ನಡೆಸಿದ್ದು, ಅದಕ್ಕೆ ಅಸ್ಪದ ಕೊಡಬಾರದೆಂಬ ಕಾರಣಕ್ಕೆ ಒಂದೇ ಕಂತಿನಲ್ಲಿ ಸಾಲಮನ್ನಾ ಯೋಜನೆಯ ಸಂಪೂರ್ಣ ಹಣವನ್ನು 2019-2020 ನೇ ಸಾಲಿನಲ್ಲಿ ಭರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ