ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಬಸವರಾಜ್ ಬೊಮ್ಮಾಯಿ

ಸೋಮವಾರ, 3 ಏಪ್ರಿಲ್ 2023 (14:01 IST)
ನಿನ್ನೆ ಕಾಂಗ್ರೆಸ್ಸಿನ ವಕ್ತಾರರು ಮತ್ತು ಸುರ್ಜೆವಾಲ್ ಟ್ವೀಟ್ ಮಾಡಿರುವುದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ‌ ಪ್ರತಿಕ್ರಿಯಿಸಿದ್ದಾರೆ.ನಾವೂ ಕೊಟ್ಟಿರೋ ಮೀಸಲಾತಿ ಕಾನೂನು ಬಾಹಿರ, ಸಂವಿಧಾನ ವಿರೋಧಿ ಅಂತಾ ಕೆಲ ಕೆಳಮಟ್ಟದ ಶಬ್ದಗಳನ್ನ ಬಳಸಿದ್ದಾರೆ.ಕಾಂಗ್ರೆಸ್ ಗೆ ಅಂಬೇಡ್ಕರ್‌ ಮೇಲೆ ಪ್ರೀತಿ ಇಲ್ಲ ಅವರು ಬರೆದಿರುವ ಸಂವಿಧಾನದ ಮೇಲೆ ನಂಬಿಕೆ ಇಲ್ಲ.ಜನಸಂಖ್ಯೆ ಆಧಾರಿತವಾಗಿ ಕೊಡಬೇಕು ಅಂತಾ ಸಂವಿಧಾನವಿದೆ.ನಾವೂ ಅದರನುಗುಣವಾಗಿ ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದೇವೆ.ಶೆಡ್ಯೂಲ್ 9  ಗೆ ಸೇರಿಸಲು ಶಿಫಾರಸ್ಸು ಮಾಡಿದ್ದೇವೆ.ಅವರ ಕಾಲದಲ್ಲಿ ಮಾಡಿಲ್ಲ, ಅವರನ್ನ ಬರೀ ವೋಟ್ ಬ್ಯಾಂಕ್ ಗಾಗಿ ಬಳಸಿದ್ರು.ನಾಗಮೋಹನ್ ದಾಸ್ ವರದಿ ಬಂದು ೪ ವರ್ಷ ಆಯ್ತು ಅಂತಾ ಸುಳ್ಳು ಹೇಳ್ತಿದ್ದಾರೆ.ಯಡಿಯೂರಪ್ಪ ನವರು ಅವಧಿಯಲ್ಲಿ ರೀಪೋರ್ಟ್ ಬಂದ ಕೂಡಲೇ ೬ ತಿಂಗಳಿಗೆ ಸಚಿವ ಸಂಪುಟ ಸಭೆ ನಡೆಸಿದರು.ಕ್ಯಾಬಿನೇಟ್ ನಲ್ಲಿ ಅವರ ಪರ ನಿರ್ಣಯ ಮಾಡಿದ್ವಿ.ಅವರ ಪರ ಆ್ಯಕ್ಟ ಮಾಡಿ ನಮ್ಮ ಸರ್ಕಾರ ಆದೇಶ ತಂದು ಶೆಡ್ಯೂಲ್ ೯ ಗೆ ಸೇರಿಸಿದ್ವಿ.ನಾವೂ ಸಾಮಾಜಿಕ ನ್ಯಾಯ ಕೊಡೋದನ್ನ ಟೀಕೆ ಮಾಡ್ತಿದೆ.ಕಾಂಗ್ರೆಸ್ ದಲಿತ, ಹಿಂದುಳಿದ ವರ್ಗದ, ಲಿಂಗಾಯುತ, ಒಕ್ಕಲಿಗರ ವಿರೋಧಿಯಾಗಿದೆ.ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ರು.
 
ಅಲ್ಲದೇ ನಾವೂ ವಾಪಸ್ ಬಂದ್ಮೇಲೆ ಹಿಂದೆ ತೆಗೆದುಕೊಳ್ಳುತ್ತೇವೆ ಅಂತಾ ಕಾಂಗ್ರೆಸ್ ಹೇಳ್ತಿದೆ.ಅವರು ವಾಪಸ್ ಬರುವ ಪ್ರಶ್ನೆಯೆ  ಇಲ್ಲ.ಇದನ್ನ ಹಿಂದೆ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ.ಅವರಿಗೆ ಶಕ್ತಿನೂ ಇಲ್ಲ ಅವಕಾಶನೂ ಇಲ್ಲ.ಇದನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ.ನಾವೂ ಮಾಡಿರೋದನ್ನ ನೋಡಿ ತಳಮಳಗೊಂಡು ಈ ರೀತಿ ಮಾಡ್ತಿದ್ದಾರೆ ಎಂದು ಸಿಎಂ ಕಾಂಗ್ರೆಸ್ ಗೆ ಟಾಂಗ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ