ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ಸಿಟಿ ರೌಂಡ್ಸ್ ಕೈಗೊಂಡಿದ್ದಾರೆ. ನಗರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ.
ಸದ್ಯ ಕೆ.ಆರ್.ಪುರಂನತ್ತ ಬೊಮ್ಮಾಯಿ ತೆರಳಿದ್ದು ಗುಂಡಿಮಯವಾಗಿರುವ ಹೆಣ್ಣೂರು ರಸ್ತೆಯಲ್ಲಿ ಹೋಗಲು ಸಿಎಂ ಹೈರಾಣಾಗಿದ್ದಾರೆ.
ಸಿಎಂ ಬೊಮ್ಮಾಯಿ ಇಂದು ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್ ಕೈಗೊಂಡಿದ್ದಾರೆ. ಗುಂಡಿಮಯವಾಗಿರುವ ಹೆಣ್ಣೂರು ರಸ್ತೆಯಲ್ಲಿ ಸಂಚರಿಸುವಾಗ ಸಿಎಂ ಹೈರಾಣಾದ್ರು. ಸದ್ಯ ಹೆಣ್ಣೂರು ಬಂಡೆಯ ವಡ್ಡರಪಾಳ್ಯಕ್ಕೆ ಹಾದುಹೋಗುವ ರಾಜಕಾಲುವೆ, ಶಿರಡಿ ಸಾಯಿಬಾಬಾ ಲೇಔಟ್ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಸಿಎಂಗೆ ಸ್ಥಳೀಯ ಶಾಸಕ ಬೈರತಿ ಬಸವರಾಜ ಸಾಥ್ ಕೊಟ್ಟಿದ್ದಾರೆ. ಮೊದಲಿಗೆ ಸಿಎಂ ಬೊಮ್ಮಾಯಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ್ರು. ಬಳಿಕ ರಾಜಕಾಲುವೆಯ ಮ್ಯಾಪ್ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದ್ರು. ನಗರದಲ್ಲಿ ಸುರಿದ ಮಳೆಯಿಂದಾಗಿ ರಾಜಕಾಲುವೆ ತುಂಬಿ ಪಕ್ಕದ ಲೇಔಟ್ಗಳಿಗೆ ನೀರು ನುಗ್ಗಿ ಸಾಕಷ್ಟು ಅನಾಹುತಗಳಾಗಿತ್ತು.
ಸಿಟಿ ರೌಂಡ್ಸ್ ವೇಳೆ ಕೊತ್ತನೂರು ನಿವಾಸಿಗಳು ಸಿಎಂ ಬೊಮ್ಮಾಯಿ ಬಳಿ ತಮ್ಮ ಸಮಸ್ಯೆ ತಿಳಿಸಿದ್ದಾರೆ. ಕಸದಿಂದಾಗಿ ಚರಂಡಿ ಬ್ಲಾಕ್ ಆಗಿ ಸಮಸ್ಯೆಯಾಗುತ್ತಿದೆ. ಹೀಗಾಗಿ ಮನೆಗಳಿಗೆ ನೀರು ನುಗ್ಗುತ್ತಿದೆ. ಶಾಶ್ವತ ಪರಿಹಾರ ಒದಗಿಸಿ ಎಂದು ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.