ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಭೇಟಿ ಮಾಡಿದ ಸಿಎಂ ಬೊಮ್ಮಾಯಿ

ಶನಿವಾರ, 14 ಆಗಸ್ಟ್ 2021 (23:22 IST)
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಮೈಸೂರು ರಸ್ತೆಯ ಕೆಂಗೇರಿ ಬಳಿ ಇರುವ ಕಾಗಿನೆಲೆ ಕನಕ ಗುರುಪೀಠದ
ಶಾಖಾ ಮಠಕ್ಕೆ ಭೇಟಿ ನೀಡಿ ಕಾಗಿನೆಲೆ ಮಹಾಸಂಸ್ಥಾನ ಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಶ್ರೀ ಗಳ ಆಶೀರ್ವಾದ ಪಡೆದರು.
ನಂತರ ಮಾತನಾಡಿದ ಸಿಎಂ ಬೊಮ್ಮಾಯಿಯವರು, ಈಗಾಗಲೇ ಶ್ರೀಗಳು ಕನ್ನಡ ನಾಡಿನ ಅಭಿವೃದ್ಧಿಗೆ ಆಶೀರ್ವಾದ ಮಾಡಿದ್ದಾರೆ. ಇನ್ನು ಕುರುಬ ಸಮುದಾಯಕ್ಕೆ ಅನ್ಯಾಯವಾದಾಗ ಅದರ ‌ಬಗ್ಗೆ ಹೋರಾಟ ಮಾಡುವುದು ಒಳಿತು. ನಾಳೆ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಲು ಪರಮ ಪೂಜ್ಯರಿಗೆ ಅಹ್ವಾನ ಮಾಡಲಾಗಿದೆ. ಕುರುಬ ಸಮುದಾಯದ ಅಭ್ಯುದಯಕ್ಕೆ ನಾನು ವಿಶೇಷ ಗಮನ ಹರಿಸುತ್ತೆನೆಂದು ಹೇಳಿದರು.
ಇನ್ನು ಇದೇ ವಿಚಾರವಾಗಿ ಮಾತನಾಡಿದ ನಿರಂಜನಾನಂದ ಪುರಿ ಮಹಾಸ್ವಾಮಿಗಳು, ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಇಟ್ಟು ಪೂಜಿಸಬೇಕು ಎಂಬುದು ಸಮಾಜದ ಬೇಡಿಕೆಯಾಗಿತ್ತು. ಈಗಾಗಲೇ ರಾಯಣ್ಣನ ಸಮಾಧಿಯಿಂದ ಪಾದಯಾತ್ರೆ ಮಾಡಿ ಬೇಡಿಕೆ ಇಟ್ಟದ್ವಿ. ಅದರಂತೆ ಸಿಎಂ ಬೊಮ್ಮಾಯಿಯವರು ರಾಜಧಾನಿಯಲ್ಲಿ,ಜಿಲ್ಲಾ ಘಟಕದಲ್ಲಿ ಸರ್ಕಾರಿ ಗೌರವ ನೀಡುವಂತೆ ಆದೇಶಿಸಿದ್ದಾರೆ
ಸಿಎಂಗೆ ಇಡೀ ಕುರುಬ ಸಮುದಾಯದ ಪರವಾಗಿ ಧನ್ಯವಾದಗಳು. ನಾಳೆ‌ ನಾನು ಕೂಡ ಕಾರ್ಯಕ್ರಮದಲ್ಲಿನ ಭಾಗವಹಿಸುತ್ತೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಚಿವರಾದ ಕೆ ಎಸ್ ಈಶ್ವರಪ್ಪ, ಎಂ ಟಿ ಬಿ ನಾಗರಾಜ ಕೂಡ ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ