ಸಿಎಂ ಬಜೆಟ್ ಮಂಡಿಸುವುದು ಡೌಟ್ ಎಂದಿದ್ದಕ್ಕೆ ದೋಸ್ತಿ ಸರ್ಕಾರದಲ್ಲಿ ಆತಂಕ

ಸೋಮವಾರ, 4 ಫೆಬ್ರವರಿ 2019 (08:40 IST)
ಬೆಂಗಳೂರು : ಫೆಬ್ರವರಿ 8ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಬಜೆಟ್​ ಮಂಡಿಸಲಿದ್ದಾರೆ. ಆದರೆ ಬಿಜೆಪಿಯವರು, ಸಿಎಂ ಈ ಬಾರಿ ಬಜೆಟ್ ಮಂಡಿಸುವುದು ಡೌಟ್ ಎಂದಿದ್ದಕ್ಕೆ ದೋಸ್ತಿ ಸರ್ಕಾರದಲ್ಲಿ ಆತಂಕ ಶುರುವಾಗಿದೆ ಎನ್ನಲಾಗಿದೆ.


ಹೌದು. ಬಿಜೆಪಿ ನಾಯಕರು ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಆತಂಕಗೊಂಡ  ದೋಸ್ತಿ ಸರ್ಕಾರ ಫೆ.6 ರಿಂದ ಆರಂಭವಾಗಿಲಿರುವ ಜಂಟಿ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದ್ದಾರೆ.


ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಡಿಸಿಎಂ ಜಿ. ಪರಮೇಶ್ವರ್ ನೇತೃತ್ವದಲ್ಲಿ ಫೆಬ್ರವರಿ 6 ರಂದು ಖಾಸಗಿ ಹೊಟೇಲ್ ​ನಲ್ಲಿ ದೋಸ್ತಿ ಪಕ್ಷಗಳ ಶಾಸಕರಿಗೆ, ಸಚಿವರಿಗೆ ಔತಣಕೂಟ ಏರ್ಪಡಿಸಲಾಗಿದೆ. ಔತಣಕೂಟದ ಜತೆಗೆ ಎರಡೂ ಪಕ್ಷಗಳ ಜಂಟಿ ಶಾಸಕಾಂಗ ಸಭೆ ನಡೆಸಲು ಉಭಯ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ