1.6 ಲಕ್ಷ ಮನೆ ನಿರ್ಮಾಣಕ್ಕೆ ಮಾರ್ಚ್ ಗಡುವು ಕೊಟ್ಟ-ಸಿಎಂ
ರಾಜ್ಯಾದ್ಯಂತ ವಸತಿ ಇಲಾಖೆಯ ವಿವಿಧ ಯೋಜನೆಗಳಡಿ ನಿರ್ಮಿಸುತ್ತಿರುವ 1.6 ಲಕ್ಷ ಮನೆಗಳ ನಿರ್ಮಾಣ 2024ರ ಮಾರ್ಚ್ ಒಳಗಾಗಿ ಪೂರ್ಣಗೊಳ್ಳಬೇಕು. ಜತೆಗೆ ರಾಜೀವ್‌ಗಾಂಧಿ ವಸತಿ ನಿಗಮದಿಂದ ನಿರ್ಮಿಸುತ್ತಿರುವ 52,189 ಮನೆಗಳ ನಿರ್ಮಾಣವನ್ನು ಸರ್ಕಾರದ ಹಣದಿಂದಲೇ ಅಗತ್ಯವಿರುವ ಹೆಚ್ಚುವರಿ ಅನುದಾನಕ್ಕೆ ಸಚಿವ ಸಂಪುಟ ಸಭೆ ಮುಂದೆ ಪ್ರಸ್ತಾವನೆ ಸಲ್ಲಿಸಬೇಕು ಎಂದು CM ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.