ಬಹು ನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷಿಯಾಗಿರುವ ಗ್ರಾಮ ವಾಸ್ತವ್ಯಕ್ಕೆ ಪದೇ ಪದೇ ಬಿಜೆಪಿಯವರು ಅಡ್ಡಿ ಪಡಿಸುತ್ತಿರುವುದಕ್ಕೆ ಸಿಎಂ ಹೊಸ ರೀತಿಯಲ್ಲಿ ಟಾಂಗ್ ನೀಡಲು ಸಜ್ಜಾಗಿದ್ದಾರೆ.
ವಿಪಕ್ಷವಾಗಿರುವ ಬಿಜೆಪಿಯ ನಾಯಕರು ಗ್ರಾಮವಾಸ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಪದೇ ಪದೇ ಟೀಕೆ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಅದಕ್ಕೆ ಮೌನವೇ ಉತ್ತರ. ಹೀಗಂತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೀದರ್ ನಲ್ಲಿ ಮಾತನಾಡಿದ ಅವರು, ಹೈದ್ರಾಬಾದ್ ಕರ್ನಾಟಕ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಈಗಾಗಲೇ ಗ್ರಾಮ ವಾಸ್ತವ್ಯ ಪೂರ್ಣಗೊಳಿಸಲಾಗಿದೆ. ವಿಧಾನ ಸೌಧದಲ್ಲಿರುವ ಆಡಳಿತವನ್ನು ಜನರ ಬಳಿಗೆ ತಂದಿರುವೆ.
ಹಳ್ಳಿಯ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗಿದೆ. ಉಳಿದಿರುವ ಬಾಕಿ ಅರ್ಜಿಗಳನ್ನು ಸಿಎಂ ಕಚೇರಿಯಿಂದ ಪರಿಹಾರ ದೊರಕಿಸಿಕೊಡಲಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಇಸ್ರೆಲ್ ಮಾದರಿ ಕೃಷಿ ನೀತಿ ಅಳವಡಿಕೆ ಚಿಂತನೆ ನಡೆದಿದ್ದು, ಪ್ರಾರಂಭದಲ್ಲಿ 100 ಹಳ್ಳಿಗಳಲ್ಲಿ ನೂತನ ಯೋಜನೆ ಜಾರಿಗೊಳ್ಳಲಿದೆ ಅಂತ ಸಿಎಂ ತಿಳಿಸಿದ್ರು.