ಸಿಎಂ ಕುಮಾರಸ್ವಾಮಿ ವಿಶ್ರಾಂತಿ ಹಿಂದೆ ಬೇರೆಯದೇ ಲೆಕ್ಕಾಚಾರ?!
ನಾಳೆ ವಿವಾದಿತ ಟಿಪ್ಪು ಜಯಂತಿ ವಿಧಾನಸೌಧದಲ್ಲಿ ಸರ್ಕಾರದ ವತಿಯಿಂದ ನಡೆಸಲು ನವಂಬರ್ 3 ರಂದೇ ನಿರ್ಧರಿಸಲಾಗಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ನನ್ನ ಹೆಸರು ಹಾಕಬೇಡಿ ಎಂದು ಸಿಎಂ ಮೊದಲೇ ಸೂಚಿಸಿದ್ದರು.
ಟಿಪ್ಪು ಜಯಂತಿ ವಿವಾದಗಳು, ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಅಧಿಕಾರ ಹೋಗುತ್ತದೆ ಎಂಬ ನಂಬಿಕೆಗಳಿಂದಾಗಿ ಸಿಎಂ ಈ ಕಾರ್ಯಕ್ರಮದಿಂದ ದೂರ ಉಳಿದಿದ್ದಾರಾ ಎಂಬ ಊಹಾಪೋಹಗಳು ಎದ್ದಿವೆ. ಹೀಗಾಗಿ ಮುಖ್ಯಮಂತ್ರಿಗಳು ಕಾರ್ಯಕ್ರಮದಿಂದ ದೂರ ಉಳಿದರೆ ಮತ್ತೊಂದು ವಿವಾದವಾಗುವ ಸಾಧ್ಯತೆಯಿದೆ.