ಸಿಎಂ ಸೆಕ್ಯೂರಿಟಿಗೆ ಗುಂಡಿಕ್ಕಿ ಕೊಂದ ಭೂಪ

ಸೋಮವಾರ, 5 ಆಗಸ್ಟ್ 2019 (19:11 IST)
ಮುಖ್ಯಮಂತ್ರಿಯ ಸೆಕ್ಯೂರಿಟಿಯೊಬ್ಬರನ್ನ ಗುಂಡಿಕ್ಕಿ ಕೊಲೆ ಮಾಡಿರೋ ಘಟನೆ ನಡೆದಿದೆ.

ಗುಂಡಿಗೆ ಸಾವನ್ನಪ್ಪಿದವನನ್ನ ಸುಖವಿಂದರ್ ಎಂದು ಗುರುತಿಸಲಾಗಿದೆ. ಇವರು ಪಂಜಾಬ್ ಮುಖ್ಯಮಂತ್ರಿ ಅಮರಿಂದ ಸಿಂಗ್ ಅವರ ಸೆಕ್ಯುರಿಟಿ ಆಗಿ ಕೆಲಸ ಮಾಡುತ್ತಿದ್ರು.

ಡಿಸ್ಕೋ ಒಂದರಲ್ಲಿ ಆರೋಪಿ ಚರಣರಾಜ್ ಎಂಬಾತ ಮಹಿಳೆಯನ್ನ ಚುಡಾಯಿಸುತ್ತಿದ್ದ. ಇದನ್ನ ತಡೆಯೋಕೆ ಅಂತ ಹೋದ ಸುಖವಿಂದರ್ ಮೇಲೆ ಆರೋಪಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.

ಮಹಿಳೆಯೊಂದಿಗೆ ಅಸಭ್ಯವಾಗಿ ಆರೋಪಿ ವರ್ತಿಸುತ್ತಿದ್ದ ಕ್ಲಬ್ ಸದಸ್ಯರು ಹೊರ ಹೋಗುವಂತೆ ತಿಳಿಸಿದ್ದಾರೆ. ಆದರೂ ಸುಖವಿಂದರ್ ಜತೆ ಜಗಳ ಮಾಡಿಕೊಂಡ ಆರೋಪಿ ಪಾರ್ಕಿಂಗ್ ಗೆ ಬಂದ ವೇಳೆ ಕೊಲೆ ಮಾಡಿ ಓಡಿ ಹೋಗಿದ್ದಾನೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ