ಸಿಎಂ ಸಿದ್ದರಾಮಯ್ಯನವರೇ ಬಂದು ನೀರು ಕುಡಿದು ಹೋಗಲಿ: ಮಹಿಳೆಯರ ಆಕ್ರೋಶ

ಭಾನುವಾರ, 18 ಜೂನ್ 2017 (13:38 IST)
ನಲ್ಲಿಯಲ್ಲಿ ಕುಡಿಯುವ ನೀರಿನ ಬದಲಿಗೆ ಕೊಳದ ನೀರು ಬರುತ್ತಿದೆ. ಸಿಎಂ ಸಿದ್ದರಾಮಯ್ಯನವರೇ ಬಂದು ನೀರು ಕುಡಿದು ಹೋಗಲಿ ಎಂದು ಸ್ಥಳೀಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಪ್ರತಿದಿನ 500 ರಿಂದ 600 ರೂಪಾಯಿಗಳನ್ನು ನೀಡಿ ಟ್ಯಾಂಕರ್‌ನಲ್ಲಿ ನೀರು ತರಿಸುತ್ತಿದ್ದೇವೆ. ಸರಕಾರ ಕುಡಿಯುವ ನೀರಿನ ಸಮಸ್ಯೆ ಪರಿಹಸಲು ಮುಂದಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
 
ಜೂನ್ 4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ 24 ಗಂಟೆಗಳ ಕಾಲ ನೀರು ಸೇವೆ ಒದಗಿಸುವ ಯೋಜನೆಯನ್ನು ಲೋಕಾರ್ಪಣೆ ಮಾಡಿ, 24 ಗಂಟೆಗಳ ಕಾಲ ನೀರಿನ ಸೌಲಭ್ಯ ದೊರೆಯಲಿದೆ ಎಂದು ಭರವಸೆ ನೀಡಿದ್ದರು. 
 
ಆದರೆ, 15 ದಿನಗಳಲ್ಲಿ ಕೇವಲ 2-3 ದಿನ ಮಾತ್ರ ನೀರು ಬಂದಿದೆ. ಅದರಲ್ಲೂ ಬಂದ 2-3 ದಿನಗಳಲ್ಲಿ ನಲ್ಲಿಯಲ್ಲಿ ಕುಡಿಯುವ ನೀರಿನ ಬದಲು ಕೊಳಕು ನೀರು ಬರುತ್ತಿದೆ ಎಂದು ಸ್ಥಳೀಯ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/ 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ