ಉದ್ಯಮಿಗಳ ಸಾಲ ಮನ್ನಾ ಮಾಡಿದ ಮೋದಿ, ರೈತರ ಸಾಲ ಯಾಕೆ ಮನ್ನಾ ಮಾಡಲ್ಲ: ಸಿಎಂ ಆಕ್ರೋಶ

ಗುರುವಾರ, 3 ಮೇ 2018 (16:53 IST)
ಕೇಂದ್ರ ಸರಕಾರ ಉದ್ಯಮಿಗಳ ಎರಡೂವರೆ ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ.ರೈತರ ಸಾಲ ಮಾತ್ರ ಮನ್ನಾ ಮಾಡಲು ಕೇಂದ್ರಕ್ಕೆ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯ ಹರಿಹರದಲ್ಲಿ ಸಿಎಂ ಸಿದ್ದರಾಮಯ್ಯ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ಇದು ಆರ್ಥಿಕತೆ ಅದೋಗತಿ ಆಗಲ್ವೆ ದೇವೇಗೌಡ್ರು ಒಂದು ಸಾರಿನೂ ಸಾಲಮನ್ನಾ ಮಾಡಿ ಅಂತ ಚಕಾರ ಎತ್ತಿಲ್ಲ ಎಂದು ಆರೋಪಿಸಿದರು.
 
2004ರಲ್ಲಿ ನಾನು ಬಿಜೆಪಿ ಹೋಗಲು ಮಾತನಾಡಿದ್ದೆ ಅಂತ ಆರೋಪ ಮಾಡಲಾಗುತ್ತಿದೆ. ನಮ್ಮ ಹೋರಾಟ ಕೋಮುವಾದಿಗಳ ವಿರುದ್ದ ಜೆಡಿಯುಗೆ ಎಲ್ಲಾ ಮುಖಂಡರು ಹೋದಾಗ ನಾವು ಜೆಡಿಎಸ್ ಕಟ್ಟಿದ್ದೆವು ಎಂದು ತಿರುಗೇಟು ನೀಡಿದರು.
 
ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಮಾತು ಆಡುತ್ತಾರೆ. ಇದು ಬಿಜೆಪಿ ಹಿಡನ್ ಅಜೆಂಡ. ಸಂವಿಧಾನ ಮೂಲ ಸ್ವರೂಪ ಬದಲಾವಣೆ ಮಾಡಿದ್ರೆ ರಕ್ತಕ್ರಾಂತಿ ಆಗುತ್ತದೆ ಎಂದು ಕೇಂದ್ರ ಸರಕಾರವನ್ನು ಎಚ್ಚರಿಸಿದರು.
 
ಮುಸಲ್ಮಾನರಿಗೆ, ಕ್ರಿಶ್ಚಿಯನ್ ರಿಗೆ ಒಂದೂ ಟಿಕೆಟ್ ಕೊಟ್ಟಿಲ್ಲ. ಮೋದಿಯವರದ್ದು ಸಬ್ ಕಾ ಸಾತ್ ಅಲ್ಲ, ಸಬ್ ಕಾ ವಿನಾಶ್ ನರೇಂದ್ರ ಮೋದಿಯವರು ನುಡಿದಂತೆ ನಡೆಯಲ್ಲ ಆದ್ರೆ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತೆ. ಬಿಜೆಪಿ ಬಣ್ಣದ ಮಾತುಗಳಿಗೆ ಮರುಳಾಗಬೇಡಿ ಎಂದು ಸಲಹೆ ನೀಡಿದರು.
 
ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಹರಿಹರದ ಭೈರನಪಾದ ನೀರಿನ ಯೋಜನೆ ಮಾಡ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಮತದಾರರಿಗೆ ಭರವಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ