ಸಿಗರೇಟ್ ಬಿಟ್ಟ ಸಿಕ್ರೇಟ್ ಹೇಳಿದ ಸಿಎಂ ಸಿದ್ದರಾಮಯ್ಯ

Sampriya

ಸೋಮವಾರ, 1 ಜುಲೈ 2024 (16:27 IST)
Photo Courtesy X
ಬೆಂಗಳೂರು: ಈ ಹಿಂದೆ ಸಿಗರೇಟ್ ಸೇದುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದನ್ನು ಯಾಕೆ ಬಿಟ್ಟೆ ಎಂಬುದರ ಬಗ್ಗೆ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ನಾನು 1987ರಲ್ಲಿ ಸಿಗರೇಟ್‌ ಸೇದುವುದನ್ನು ಬಿಟ್ಟೆ. ಸಿಗರೇಟ್ ಸೇವನೆ ಮಾಡಿದ್ದರಿಂದ ನನಗೆ ಹೃದಯ ಸಂಬಂಧಿ ಕಾಯಿಲೆಗಳು ಶುರುವಾಯಿತು. 2000 ಇಸವಿಯಲ್ಲಿ ಆಂಜಿಯೋಪ್ಲ್ಯಾಸ್ಟಿ ಮಾಡಿಸಿಕೊಂಡೆ. ಹಾರ್ಟ್ ಸಮಸ್ಯೆ ಜತೆ ಇದೀಗ ಡಯಾಬಿಟಿಕ್ ಕೂಡಾ ಸೇರಿಕೊಂಡಿದೆ ಎಂದರು.

ಸಿಗರೇಟ್ ಸೇವನೆ ಮಾಡುವುದರಿಂದ ಆಯಸ್ಸು ಕಡಿಮೆಯಾಗುತ್ತದೆ ಎಂದು ತಿಳಿದು ಅದಕ್ಕೂ ಪೂರ್ಣ ವಿರಾಮ ನೀಡಿದೆ. ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡರೆ ಅನೇಕ ರೋಗ ಕಂಟ್ರೋಲ್ ಆಗುತ್ತದೆ ಎಂದು ಅವರು ಸಲಹೆ ನೀಡಿದರು.

ವೈದ್ಯ ವೃತ್ತಿ ಪವಿತ್ರವಾದ ವೃತ್ತಿ‌. ಅದಕ್ಕೆ ವೈದ್ಯೋ ನಾರಾಯಣೋ ಹರಿ ಅಂತ ಕರೆಯುತ್ತಾರೆ. ವೈದ್ಯರು ದೇವರಿಗೆ ಸಮಾನರು ಎಂದು ನಂಬುತ್ತಾರೆ. ಇಂತಹ ವೈದ್ಯರು ಕೊರೊನಾ ಸಂದರ್ಭದಲ್ಲಿ ಮಾಡಿದ ಸೇವೆಯನ್ನು ಯಾರೂ ಮರೆಯುವಂತಿಲ್ಲ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ