ಸಚಿವರಾದ ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆಗೆ ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್

ಬುಧವಾರ, 13 ಸೆಪ್ಟಂಬರ್ 2017 (15:04 IST)
ಸಿದ್ದಗಂಗಾ ಶ್ರೀಗಳು ಲಿಂಗಾಯತ ಸ್ವತಂತ್ರ ಧರ್ಮ ಆಗಬೇಕೆಂದು ಹೇಳಿದ್ದಾರೆಂದು ಹೇಳಿದ್ದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ಸರಿಯಲ್ಲವೆಂದು ಮಠದಿಂದ ಪ್ರೆಸ್ ರಿಲೀಸ್ ಬಿಡುಗಡೆ ಆದ ಬಳಿಕ ಸಚಿವರು ಪೇಚಿಗೆ ಸಿಲುಕಿದ್ದಾರೆ. ಇದೀಗ, ಸಿಎಂ ಸಿದ್ದರಾಮಯ್ಯ ಸಹ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಿದ್ದಗಂಗಾ ಶ್ರೀಗಳ ಜೊತೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಮಾತನಾಡಿದ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಈಶ್ವರ್ ಖಂಡ್ರೆಗೆ ಸಚಿವ ಸಂಪುಟ ಸಭೆಯಲ್ಲಿ ಸಿಎಂ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಶ್ರೀಗಳ ಜೊತೆ ಚರ್ಚೆ ನಡೆಸಿದ್ದರ ಬಗ್ಗೆ ಯಾಕೆ ಆತುರಾತುರವಾಗಿ ಹೇಳಿಕೆ ನೀಡಿದ್ರಿ.? ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ಯಾಕೆ..? ಪಾಟೀಲ್ ನೀವ್ ಏನ್ ಕೇಳಿಸಿಕೊಂಡ್ರಿ..? ನಿಮ್ಮಿಂದ, ಸರ್ಕಾರಕ್ಕೆ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ.

ಇದೇವೇಳೆ, ಈಶ್ವರ್ ಖಂಡ್ರೆಯವರೇ ನೀವ್ ಏನ್ರಿ ಮಾಧ್ಯಮಗಳ ಮುಂದೆ ಏನೇನೋ ಹೇಳಿಕೆ ಕೊಡ್ತೀರಾ..? ನಿಮ್ಮಿಂದ ಆಗಿರುವ ಡ್ಯಾಮೇಜ್ 2 ದಿನಗಳಲ್ಲಿ ಕಂಟ್ರೋಲ್ ಆಗಬೇಕು. ಅದೇನ್ ಮಾಡ್ತೀರೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆಂದು ತಿಳಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ