ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂರ್ವ ಸಿದ್ಧತೆ ಇಲ್ಲದೆ 500, 1000 ಮೂಖ ಬೆಲೆಯ ನೋಟುಗಳ ಬದಲಾವಣೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಕುರಿತು ನಾವು ಮಿಟಿಂಗ್ ಮಾಡುತ್ತೇವೆ. ಪಕ್ಷದ ವತಿಯಿಂದ ಸಾರ್ವಜನಿಕರಿಗೆ ನೆರವಾಗುತ್ತೇವೆ ಎಂದು ಭರವಸೆ ನೀಡಿದರು.
ಸಚಿವರ ಪೋಲಿ ಚಿತ್ರ ವೀಕ್ಷಣೆ ಸಮರ್ಥಿಸಿಕೊಂಡ ಸಿಎಂ.....
ರಾಜ್ಯ ಸರಕಾರ ಯೋಜಿತ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವೇಳೆ ಶಿಕ್ಷಣ ಸಚಿವರಿಂದ ಯುವತಿಯರ ಅರೆನಗ್ನ ಚಿತ್ರ ವೀಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ನೊಟಕ್ಕೆ ಶಿಕ್ಷಣ ಸಚಿವ ತನ್ವೀರ್ ಸೇಠ್ ತಪ್ಪು ಮಾಡಿದಂತೆ ಕಾಣಿಸುತ್ತಿಲ್ಲ. ಈ ಕುರಿತು ಸಿಐಡಿ ಹಾಗೂ ಕ್ರೈಂ ಬ್ರ್ಯಾಂಚ್‌ನಿಂದ ತನಿಖೆ ಮಾಡಿಸುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ವೀರ್ ಸೇಠ್ ವಿವರಣೆ ನೀಡಿದ್ದಾರೆ ಎಂದರು.
ಬೆಳಗಾವಿ ಮೇಯರ್, ಉಪಮೇಯರ್ ಅನರ್ಹಕ್ಕೆ ಚಿಂತನೆ......
ಕರ್ನಾಟಕ ರಾಜ್ಯೋತ್ಸವದಂದು ಬೆಳಗಾವಿಯ ಮೇಯರ್, ಉಪಮೇಯರ್ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಲು ರಾಜ್ಯ ಸರಕಾರ ಚಿಂತಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.