ಪತ್ರಕರ್ತರಿಗೆ ವ್ಯಾಕರಣ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ

ಶುಕ್ರವಾರ, 18 ನವೆಂಬರ್ 2016 (15:23 IST)
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರ್ತಕರ್ತರಿಗೆ ವ್ಯಾಕರಣ ಪಾಠ ಮಾಡಿದ ಪ್ರಸಂಗ ಇಂದು ಸಿಎಂ ಗೃಹ ಕಚೇರಿಯಲ್ಲಿ ನಡೆಯಿತು. 
 
ಹಿಂದಿನ ಸರಕಾರದವರಿಗೆ ಜ್ಞಾನ ಇರಲಿಲ್ಲ. ಹೀಗಾಗಿ ಯಾವುದೇ ನಿರ್ಧಾರವನ್ನು ಸರಿಯಾಗಿ ತೆಗೆದುಕೊಂಡಿರಲಿಲ್ಲ ಎಂದು ಪಕ್ಷದ ನಾಯಕರು ಮಾತಿಗೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾಮಾನ್ಯವಾಗಿ ಎಲ್ಲರಿಗೂ ಜ್ಞಾನ ಇದ್ದೇ ಇರುತ್ತದೆ. ಆದರೆ, ಆ ಜ್ಞಾನ ಉದಯವಾಗಬೇಕು ಅಷ್ಟೇ ಎಂದರು. 
 
ಜ್ಞಾನ+ಉದಯ=ಜ್ಞಾನೋದಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಿದರು. ಇದ್ದರ ನಡುವೆ ಪತ್ರಕರ್ತರೊಬ್ಬರು ಸುವರ್ಣದೀರ್ಘ ಸಂಧಿ ಎಂದು ಉತ್ತರಿಸಿದಾಗ, ಇಲ್ಲ 'ಅ' ಕಾರಕ್ಕೆ 'ಉ' ಕಾರ ಸೇರಿದಾಗ ಗುಣ ಸಂಧಿಯಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದ ಘಟನೆ ನಡೆಯಿತು. 
 
ಮುಖ್ಯಮಂತ್ರಿಗಳು ಪತ್ರಕರ್ತರಿಗೆ ವ್ಯಾಕರಣ ಪಾಠ ಮಾಡಿದ್ದರಿಂದ ಪಕ್ಕದಲ್ಲೆ ಕುಳಿತಿದ್ದ ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಎಲ್ಲ ನಾಯಕರು ನಗೆಗಡಲಲ್ಲಿ ಮಿಂದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ