ದೇಶಾದ್ಯಂತಭ್ರಷ್ಟಾಚಾರ, ಖೋಟಾನೋಟುಸೇರಿದಂತೆಆರ್ಥಿಕಕಂಟಕಗಳನ್ನಪರಿಹಾರಮಾಡಲುಪ್ರಧಾನಮಂತ್ರಿನರೇಂದ್ರಮೋದಿನೋಟ್ಬ್ಯಾನ್ಮಾಡಿಹೊಸನೋಟುಗಳನ್ನಚಲಾವಣೆಗೆತಂದರು. ಆದರೆ, ಇದೀಗಹೊಸನೋಟುಗಳಖೋಟಾನೋಟುದಂಧೆಯೂಸಹಶುರುವಾಗಿದೆ. ಹೌದು, ದಾಬಸ್ಪೇಟೆಬಳಿ 2000 ರೂ. ಮುಖಬೆಲೆಯಖೋಟಾನೋಟುಚಲಾವಣೆಮಾಡುತ್ತಿದ್ದಸಹನಟಿಯನ್ನಹಿಡಿದುಸಾರ್ವಜನಿಕರೇಪೊಲೀಸರಿಗೆಒಪ್ಪಿಸಿದ್ದಾರೆಎಂದುಮಾಧ್ಯಮಗಳುವರದಿಮಾಡಿವೆ..
ದಾಬಸ್ ಪೇಟೆ ಬಳಿ ಅಂಗಡಿಯೊಂದಕ್ಕೆ ಬಂದು 2000 ರೂ. ಖೋಟಾನೋಟು ಕೊಟ್ಟು ವಸ್ತುಗಳ ಖರೀದಿಗೆ ಯತ್ನಿಸಿದ್ದಾಳೆ. ಅಂಗಡಿಯಾತ ತನ್ನಲ್ಲಿದ್ದ ಮೆಶಿನ್`ನಲ್ಲಿ ಪರೀಕ್ಷಿಸಿದಾಗ ಖೋಟಾನೋಟು ಎಂದು ಗೊತ್ತಾಗಿದೆ. ಕೂಡಲೇ ನೋಟನ್ನ ವಾಪಸ್ ಪಡೆದ ಮಹಿಳೆ ತರಾತುರಿಯಾಗಿ ಹೊರನಡೆದಿದ್ದಾಳೆ. ಮಹಿಳೆಯರ ಚಲನವಲನ ಗಮನಿಸುತ್ತಿದ್ದ ಸ್ಥಳೀಯರು ಆಕೆಯನ್ನೇ ಫಾಲೋ ಮಾಡಿ ಹಿಡಿದಿದ್ದಾರೆ ಈ ಸಂದರ್ಭ ಮತ್ತೊಮ್ಮೆ ಇಂತಹ ತಪ್ಪು ಮಾಡಲ್ಲ ಬಿಟ್ಟುಬಿಡಿ ಎಂದು ಅಂಗಲಾಚಿದ್ದಾಳೆ. ಕಾಲು ಹಿಡಿದುಕೊಳ್ಳುತ್ತೇನೆ ಬೇಡಿಕೊಂಡಿದ್ದಾಳೆ. ಬಳಿಕ ಆಂಧ್ರಪ್ರದೇಶದಲ್ಲಿ ಖೋಟಾನೋಟು ಸಿಕ್ಕಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಬಂಧಿತ ಮಹಿಳೆ ಜೊತೆ 24 ಸಾವಿ ರೂ.ನಷ್ಟು ಖೋಟಾನೋಟುಗಳು ಪತ್ತೆಯಾಗಿವೆ. ಮಹಿಳೆಯ ಮೊಬೈಲ್`ನಲ್ಲಿದ್ದ ಜಾಡು ಹಿಡಿದಿರುವ ಪೊಲೀಸರು ಮತ್ತಷ್ಟು ಜನರ ಬೇಟೆಗೆ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.