ಕೇವಲ ಮುಸ್ಲಿಮರಿಗೆ ಕಾಲೇಜು ತಪ್ಪು-ಸಿ.ಎಂ ಇಬ್ರಾಹಿಂ
ರಾಜ್ಯದಲ್ಲಿ ವಕ್ಪ ಬೋರ್ಡ್ನಿಂದ ಪ್ರತ್ಯೇಕ ಮುಸ್ಲಿಂ ಕಾಲೇಜು ಆರಂಭ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ. ವಕ್ಪ್ ಬೋರ್ಡ್ ನಿಂದ ಕಾಲೇಜ್ ಮಾಡಬಾರದು ಅಂತ ಇಲ್ಲ, ಮಾಡಬಹುದು. ಐದು ತಿಂಗಳಲ್ಲಿ ಈ ಸರ್ಕಾರ ಹೋಗುತ್ತದೆ, ನಾವು ಅಧಿಕಾರಕ್ಕೆ ಬರ್ತೇವೆ. ಹೊಸ ಕಾಲೇಜು ಆರಂಭ ಮಾಡ್ತೇವೆ ಅಂತಾ ಕಲಬುರಗಿಯಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ವಕ್ಫ್ ಬೋರ್ಡ್ನಿಂದ ಕೇವಲ ಮುಸ್ಲಿಂರಿಗೆ ಮಾತ್ರ ಕಾಲೇಜು ಮಾಡೋದು ತಪ್ಪು. ವಿದ್ಯಾದಾನ ಶ್ರೇಷ್ಠದಾನ, ಅಲ್ಲಿ ಹಿಂದು ಮುಸ್ಲಿಂ ಅಂತ ಮಾಡೋದು ಸರಿಯಲ್ಲ ಅಂತಾ ಜೆಡಿಎಸ್ ರಾಜ್ಯಾದ್ಯಕ್ಷ ಸಿ.ಎಂ ಇಬ್ರಾಹಿಂ ತಿಳಿಸಿದ್ದಾರೆ