ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡುವ ಕೆಲಸ- ಹೆಚ್.ಡಿ.ಕುಮಾರಸ್ವಾಮಿ
ಮಂಗಳವಾರ, 5 ಏಪ್ರಿಲ್ 2022 (21:01 IST)
ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡುವ ಕೆಲಸವಾಗುತ್ತಿದ್ದು, ಹಿಂದೂ ಜಾಗರಣ ವೇದಿಕೆ, ಭಜರಂಗದಳ ಬಿಜೆಪಿ ಪಕ್ಷದ ಅಂಗ ಪಕ್ಷವಾಗಿದ್ದು, ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಈ ಸಂಘಟನೆಗಳಿಗೆ ಕುಮ್ಮಕ್ಕು ನೀಡಿ ಚಿತಾವಣೆ ನಡೆಸುತ್ತಿರುವ ಬೊಮ್ಮಾಯಿ ನೇತೃತ್ವದ ಸರ್ಕಾರ ಇದೀಗ ಮೌನಕ್ಕೆ ಶರಣಾಗಿದೆ. ಇನ್ನು ಇದು ಮೌನಿ ಸರ್ಕಾರವೆಂದು ಮಾಜಿ ಸಿಎಂ ಹೆಚ್‌ಡಿಕೆ ಬಿಜೆಪಿ ವಿರುದ್ದ ವಾಗ್ಧಾಳಿ ನಡೆಸಿದ್ದಾರೆ. ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ಮಾಜಿ ಸಿಎಂ ಹೆಚ್‌ಡಿಕೆ ಅವರ ತೋಟದ ಮನೆಗೆ ರಾಜ್ಯದ ವಿವಿದೆಡೆಯಿಂದ ಹಿಂದುಳಿದ ವರ್ಗಗಳ ಮಠಾದೀಶರು ಆಗಮಿಸಿದ್ರು. ಇನ್ನು ವಾಲ್ಮೀಕಿ ಗುರುಪೀಠದ ಬ್ರಹ್ಮಾನಂದ ಗುರೂಜಿ, ಈಡಿಗ ಮಠದ ಪ್ರಣವಾನಂದ ಸ್ವಾಮಿಜೀ ಬಂಜಾರ ಮಠದ ಸರ್ದಾರ್ ಸೇವಲಾಲ್ ಸ್ವಾಮಿಜೀ, ಬೋವಿ ಮಠದ ಗಂಗಾಧರೇಶ್ವರ ಸ್ವಾಮಿ ಸೇರಿದಂತೆ ವಿವಿಧ ಮಠಾಧೀಶರು ಮಾಜಿ ಸಿಎಂ ಹೆಚ್‌ಡಿಕೆ ಅವರನ್ನ ಪ್ರಸ್ತುತ ಪರಿಸ್ಥಿತಿಯಲ್ಲಿ ಭೇಟಿ ಮಾಡಿದ್ದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿತ್ತು. ಇನ್ನು ಹಿಂದುಳಿದ ವರ್ಗಗಳ ವಿವಿಧ ಮಠಾಧೀಶರ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಹೆಚ್‌ಡಿಕೆ ಹಿಂದುಳಿದ ವರ್ಗಗಳ ಜನರು ಅನುಭವಿಸುತ್ತಿರುವ ಸಂಕಷ್ಟ ಹಾಗೂ ತಮ್ಮ ಮಠಗಳಿಗೆ ನೆರವಾಗುವ ಬಗ್ಗೆ ಚರ್ಚೆ ನಡೆಸಲು ಬಂದಿದ್ರು. ಇನ್ಬು ಆಜಾನ್ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು ಮುಸ್ಲಿಂ ಬಾಂದವರು ಹಲ ವರ್ಷಗಳಿಂದ ಪ್ರೇಯರ್ ಮಾಡಿಕೊಂಡು ಬಂದಿದ್ದು, ಈಗ ಹಿಂದೂ ಸಂಘಟನೆಗಳು ಶಬ್ದ ಮಾಲಿನ್ಯ ಎನ್ನುತ್ತಿವೆ. ನಮ್ಮ ಸಮಾಜದಲ್ಲಿನ ಧಾರ್ಮಿಕ ಸ್ಥಳಗಳಲ್ಲಿ ಮೈಕ್ ಹಾಕಿಕೊಂಡು ನಮ್ಮ ಸಂಸ್ಕೃತಿಯ ಅರಿವು ಮೂಡಿಸಲಿ. ಇದಕ್ಕೆ ನಮ್ಮ ಬೆಂಬಲ ಇದೆ ಆದ್ರೆ ಬೇರೆ ಸಮಾಜದವರ ಆಚರಣೆ ನಿಲ್ಲಿಸಿ ಎನ್ನಲು ನಮಗೆ ಹಕ್ಕಿಲ್ಲ. ರಾಜ್ಯವನ್ನ ಲೂಟಿ ಮಾಡಿ ಹಣವನ್ನ ದೋಚಿದ್ದಾರೆ. ಅಭಿವೃದ್ಧಿ ವಿಚಾರವನ್ನ ಇಟ್ಟುಕೊಂಡು ಮತ ಪಡೆಯಲು ಆಗದ ಬಿಜೆಪಿಯವ್ರು ಭಾವನಾತ್ಮಕವಾದ ವಿಷಯ ಇಟ್ಟುಕೊಂಡು ಮತ ಪಡೆಯಲು ಹವಣಿಸಿದ್ದಾರೆಂದು ಮಾಜಿ ಸಿಎಂ ಹೆಚ್‌ಡಿಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ರು.