ಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ ಸಂಪುಟ ಪುನಾರಚನೆಯಾಗಿರುವ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ 8 ಜನ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲು ಸಭೆ ಕರೆದಿದ್ದು, ಇದೀಗ ಖಾತೆ ಹಂಚಿಕೆಯ ಬಗ್ಗೆ ಕಾಂಗ್ರೆಸ್ ನಲ್ಲಿ ಪೈಪೋಟಿ ಶುರುವಾಗಿದೆ.
ಖಾಸಗಿ ಹೋಟೆಲ್ ನಲ್ಲಿ ವೇಣುಗೋಪಾಲ್ ಜೊತೆ ನಾಯಕರು ನಡೆಸಿದ ಚರ್ಚೆಯಲ್ಲಿ ಗೃಹ ಮತ್ತು ನಗರಾಭಿವೃದ್ಧಿ 2 ಖಾತೆ ಬೇಕು. ಯುವಜನ ಕ್ರೀಡಾ ಖಾತೆಯನ್ನ ಬಿಟ್ಟುಕೊಡ್ತೇನೆ ಎಂದು ಡಿಸಿಎಂ ಪರಮೇಶ್ವರ್ ಹೇಳುತ್ತಿದ್ದಾರೆ.
ನೀರಾವರಿ ಖಾತೆ ಕೊಡುವಂತೆ ನೂತನ ಸಚಿವ ಎಂ.ಬಿ.ಪಾಟೀಲ್ ಒತ್ತಡ ಹಾಕುತ್ತಿದ್ದು, ನೀರಾವರಿ ಖಾತೆ ನನಗೆ ಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಆದರೆ ಎಂ.ಬಿ.ಪಾಟೀಲ್ ಗೆ ಕಂದಾಯ ಖಾತೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕಂದಾಯ ಖಾತೆ ಹೊಂದಿರುವ ದೇಶ್ ಪಾಂಡೆಗೆ ಕೆ.ಜೆ.ಜಾರ್ಜ್ ರಿಂದ ಕೈಗಾರಿಕಾ ಖಾತೆ ನೀಡುವ ಸಾಧ್ಯತೆ ಇದೆ. ಅರಣ್ಯ ಖಾತೆ ಕೆ.ಜೆ.ಜಾರ್ಜ್ ಗೆ ನೀಡುವ ಕುರಿತು ಚರ್ಚೆ ನಡೆಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.