ಸಭೆಯಲ್ಲಿ ತೀರ್ಮಾನ: ವೀರಶೈವ ಲಿಂಗಾಯತ ಎರಡೂ‌ ಒಂದೇ– ಶಾಮನೂರು

ಗುರುವಾರ, 4 ಜನವರಿ 2018 (19:04 IST)
ವೀರಶೈವ ಲಿಂಗಾಯತ ಎರಡೂ‌ ಒಂದೇ ಎಂಬುದು ವೀರಶೈವ ಮಹಾಸಭಾದ ನಿಲುವು ಎಂದು ಮಾಜಿ ಸಚಿವ ಶಾಮನೂರು ಶಂಕರಪ್ಪ‌ ಹೇಳಿದ್ದಾರೆ.
 
ದಾವಣಗೆರೆಯಲ್ಲಿ ಮಾತನಾಡಿದ ಅವರು, ಗುರು-ವಿರಕ್ತರ ಸಭೆಯಲ್ಲೂ ಇದೇ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಯಡಿಯೂರಪ್ಪ ಕೂಡ ಮಹಾಸಭಾದ ನಿಲುವಿಗೆ ಬದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ.
 
ವೀರಶೈವ- ಲಿಂಗಾಯತ ಕುರಿತು ಫೆಬ್ರವರಿ 1 ರಂದು ಚರ್ಚೆಗೆ ದಿನಾಂಕ‌ ನಿಗದಿಯಾಗಿದೆ. ಒಂದು ವೇಳೆ ಚರ್ಚೆಗೆ ಅವಕಾಶ ನೀಡಿದರೆ ಎರಡೂ ಕಡೆ ಒಡೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ