ಕಾಂಗ್ರೆಸ್ ನನ್ನ ಜಪ ಮಾಡುತ್ತಿದ್ದಾರೆ

ಮಂಗಳವಾರ, 22 ಫೆಬ್ರವರಿ 2022 (16:49 IST)
ರಾಷ್ಟ್ರ ಧ್ವಜಕ್ಕೆ ನಾನು ಅವಮಾನ ಆಗುವ ಹೇಳಿಕೆ ನೀಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇ ಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿಕೆಶಿ ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಇಳಿಸಿ, ಭಗವಾಧ್ವಜ ಏರಿಸಿದ್ದರು ಅಂತ ಹೇಳಿದರು.
ನಾನು ಹಾರಿಸ್ತೇನೆ ಅಂತ ಹೇಳಿದ್ದೀನಾ? ಮುಂದೆ ಹಾರಿಸಬಹುದು ಅಂತ ಹೇಳಿದ್ದೇನೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ತಕ್ಷಣ ರಾಷ್ಟ್ರದ್ರೋಹಿ ಅಂತ ಅಂದೂ ಹೇಳಿದ್ದೆ, ಇಂದೂ ಹೇಳಿದ್ದೇನೆ ಎಂದರು. ಡಿಕೆಶಿ, ಸಿದ್ದರಾಮಯ್ಯ ಪದೇಪದೇ ತಮ್ಮ ಹೆಸರು ಹೇಳ್ತಿರುವ‌ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಡು ಪ್ರಾಣಿಗಳಿಗೆ ಸಿಂಹವನ್ನು ಕಂಡರೆ ಭಯ. ಹಾಗಾಗಿ, ಕಾಡು ಪ್ರಾಣಿಗಳು ಸಿಂ ಹವನ್ನ ಕಂಡು ಹೆದರಿವೆ. ಹೀಗಾಗಿ, ಪದೇಪದೇ ನನ್ನ ಹೆಸರು ಹೇಳಿ ಜಪ ಮಾಡ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ