ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನಿಯೋಗ ದೂರು ನೀಡಿದೆ.ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ, ಮಾಜಿ ಸಂಸದ ವಿಎಸ್ ಉಗ್ರಪ್ಪ, ಶಾಸಕ ರಿಜ್ವಾನ್ ಅರ್ಷದ್  ನೇತೃತ್ವದ ನಿಯೋಗದಿಂದ ದೂರು ಸಲ್ಲಿಕೆ ಮಾಡಲಿದ್ದಾರೆ.
	 
	ಬಿಜೆಪಿಯ ಚುನಾವಣಾ ಅಕ್ರಮಗಳ ಕುರಿತು ಕೈಪಡೆ ದೂರು ನೀಡಿದ್ದು,ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ಕಾಂಗ್ರೇಸ್  ಅಸ್ತ್ರ ಮಾಡಿಕೊಂಡಿದೆ .ಪ್ರತಿಯೊಬ್ಬ ಮತದಾರನಿಗೆ 6 ಸಾವಿರ ನೀಡಿ ಮತ ಕೇಳಲಾಗುವುದು ಎಂದಿದ್ದ ರಮೇಶ್ ಜಾರಕಿಹೊಳಿ.ಇದೀಗ ಇದೆ ಹೇಳಿಕೆಯನ್ನು ಅಸ್ತ್ರಮಾಡಿಕೊಂಡು ಚುನಾವಣಾ ಆಯೋಗದ ಮೆಟ್ಟಿಲನ್ನ  ಕೈ ಕಲಿಗಳು ಹೇರಿದ್ದಾರೆ.ರಾಜ್ಯದ ಐದು ಕೋಟಿ ಮತದಾರರನ್ನು 30 ಸಾವಿರ ಕೋಟಿಗೆ ಖರೀದಿಸಲು ಬಿಜೆಪಿ ಸಂಚು ರೂಪಿಸಿದೆ ಎಂದು ಕಾಂಗ್ರೇಸ್ ನಾಯಕರು ಆರೋಪಿಸಿದ್ದಾರೆ.
	 
	ಈ ಸಂಚಿಗೆ ಸಿಎಂ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  ಪ್ರೇರಣೆ ನೀಡಿದ್ದಾರೆ.ಹಾಗಾಗಿ ಕೂಡಲೇ ಈ ಪ್ರಕರಣದ ಬಗ್ಗೆ ತನಿಖೆ ನಡೆಯಬೇಕು ಎಂದು ಕೈ ನಾಯಕರು ಒತ್ತಾಯಿಸಿದಾರೆ.