ಘಟಾನುಘಟಿ ನಾಯಕರಿಗೆ ಕಾಂಗ್ರೆಸ್ ಗಾಳ..!?

ಶನಿವಾರ, 19 ಆಗಸ್ಟ್ 2023 (20:34 IST)
ಲೋಕಸಭೆ ಎಲೆಕ್ಷನ್ ಹತ್ತಿರವಾಗ್ತಿದ್ದಂತೆ ಜಂಪಿಂಗ್ ಪಾಲಿಟಿಕ್ಸ್ ಶುರುವಾಗಿದೆ..ಬಿಜೆಪಿಯ‌ಕೆಲ ಹಾಲಿ,ಮಾಜಿ ನಾಯಕರಿಗೆ ಡಿಕೆಶಿನಸದ್ದಿಲ್ಲದೆ ಗಾಳ ಹಾಕಿದ್ದಾರೆ..ಕೇವಲ ಕೇಸರಿ ಕಲಿಗಳನ್ನ ಮಾತ್ರವಲ್ಲ ದಳದ ಕುಡಿಗಳನ್ನೂ ಹೈಜಾಕ್ ಮಾಡೋಕೆ ಹೊರಟಿದ್ದಾರೆ..ಕಾಂಗ್ರೆಸ್ ನ ಮಿಷನ್-೨೦ ಗೆ ಕಮಲ ಪಡೆ ಕಂಗಾಲಾಗಿ ಹೋಗಿದೆ.ರಾಜ್ಯ ರಾಜಕಾರಣದಲ್ಲಿ ಮಿಂಚಿನ ಬೆಳವಣಿಗೆಗಳು ನಡೆದಿವೆ... ಕಾಂಗ್ರೆಸ್ ತೊರೆದವರೆಲ್ಲಾ ಮತ್ತೆ ಘರ್ ವಾಪ್ಸಿ ಆಗೋ ಮುನ್ಸೂಚನೆಗಳು ಕಾಣ್ತಿವೆ.. ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್, ಮುನಿರತ್ನಂ, ವಿ. ಸೋಮಣ್ಣ, ಭೈರತಿ ಬಸವರಾಜ್, ಬಿ.ವಿ ನಾಯಕ್, ಕುಮಾರ್ ಬಂಗಾರಪ್ಪ ಸೇರಿ ಹಾಲಿ ಮಾಜಿ ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ತಾರೆ ಅನ್ನೋ ಸುದ್ದಿ, ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ... ನಿನ್ನೆ ಯಡಿಯೂರಪ್ಪ ಕರೆದ ಸಭೆಗೆ ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್, ವಿ ಸೋಮಣ್ಣ ಗೈರಾಗುವ ಮೂಲಕ ಕಾಂಗ್ರೆಸ್ ಸೇರೋ ಸಂದೇಶಕ್ಕೆ ಪುರಾವೆ ನೀಡಿದ್ದಾರೆ..ಇತ್ತ ಡಿಕೆಶಿ ಸೈಲೆಂಟಾಗಿಯೇ ಆಪರೇಶನ್ ಮಾಡೋಕೆ ಹೊರಟಿದ್ದಾರೆ.. ಯಶವಂತಪುರ, ಕೆ.ಆರ್ ಪುರ, ರಾಜರಾಜೇಶ್ವರಿ ನಗರ, ದಾಸರಹಳ್ಳಿಯ ಕೆಲ ಮಾಜಿ ಕಾರ್ಪೋರೇಟರ್ ಗಳಿಗೆ ಗಾಳ ಹಾಕಿದ್ದಾರೆ‌... ಮೊದಲು ಚಿಕ್ಕ ಚಿಕ್ಕ ಮೀನುಗಳನ್ನ ಹಿಡಿದು ಆಮೇಲೆ ದೊಡ್ಡ ಮೀನುಗಳಿಗೆ ಬಲೆ ಬೀಸಲು ಪ್ಲಾನ್ ರೂಪಿಸಿದ್ದಾರೆ.. ಮುಂದಿನ ವಾರ ಕೆಲವು ಬಿಜೆಪಿ ಬೆಂಬಲಿಗರು ಕೈ ಹಿಡಿಯೋದು ಬಹುತೇಕ ಪಕ್ಕಾ ಆಗಿದೆ‌... ಆಪರೇಶನ್ ಹಸ್ತದಿಂದ ಇಡೀ ಬಿಜೆಪಿ ಪಡೆ ಕಂಗೆಟ್ಟಿದೆ‌.

ಲೋಕಸಭೆಯಲ್ಲಿ ಮಿಶನ್-೨೦ ಸಕ್ಸಸ್ ಗೆ ಕೈ‌ನಾಯಕರು ಪ್ಲಾನ್ ರೂಪಿಸಿದ್ದಾರೆ..ಆಪರೇಷನ್ ಹಸ್ತದ ಮೂಲಕ ಬಿಜೆಪಿ,ಜೆಡಿಎಸ್ ನಾಯಕರನ್ನ ಸೆಳೆಯೋಕೆ ಅಖಾಡಕ್ಕಿಳಿದಿದ್ದಾರೆ..ಪಕ್ಷ ತೊರೆದವರಿಗೆ ವಾಪಸ್ ಬರುವಂತೆ ಆಫರ್ ಕೊಟ್ಟಿದ್ದಾರೆ...ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ.. ಪಕ್ಷದ ಸಿದ್ದಾಂತ ಒಪ್ಪಿ ಯಾರು ಬೇಕಾದ್ರೂ ಬರಬಹುದು ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.. ಅಲ್ಲದೇ ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕದಲ್ಲಿ ಇವ್ರು ಮಾಡಿದ್ದ ಆಪರೇಶನ್ ಸರೀ‌ನಾ..? ಅವರವರ ಅನುಕೂಲಕ್ಕೆ ತಕ್ಕಂತೆ ಅವ್ರು ತೀರ್ಮಾನ ಮಾಡ್ತಾರೆ ಅಂತಾ ಬಿಜೆಪಿ ನಾಯಕರ ಆರೋಪಗಳಿಗೆ ಟಕ್ಕರ್ ಕೊಟ್ಟಿದ್ದಾರೆ.

ಹಳೆ ಮೈಸೂರು ಭಾಗಕ್ಕೆ ಡಿ.ಕೆ ಬ್ರದರ್ಸ್ ವಿಶೇಷ ಗಮನ ಕೊಟ್ಟಿದ್ದಾರೆ.. ಬೆಂಗಳೂರು ಸುತ್ತಮುತ್ತಲಿನ ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನ ಮತ್ತಷ್ಟು ಗಟ್ಟಿಗೊಳಿಸಲು ಟ್ರಬಲ್ ಶೂಟರ್ ತಂತ್ರ ಅಣಿದಿದ್ದಾರೆ. ಬಿಜೆಪಿ ಶಾಸಕರಿಗೆ ಮಾತ್ರವಲ್ಲದೇ ತೆನೆ ಹೊತ್ತ ಶಾಸಕರನ್ನೂ ಸೆಳೆಯಲು ಡಿಕೆಶಿ ಗೇಮ್ ಶುರು ಮಾಡಿದ್ದಾರೆ. ಶಾಸಕ ಸಿ‌ ಎಸ್ ಪುಟ್ಟರಾಜುಗೆ ಮಂಡ್ಯ ಎಂಪಿ ಟಿಕೆಟ್ ಆಫರ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ‌. ಇತ್ತೀಚೆಗೆ ದಳಪತಿಗಳಿಂದ ಪುಟ್ಟರಾಜು ಅಂತರ ಕಾಯ್ದುಕೊಂಡಿದ್ರು. ವಿಧಾನಸಭೆ ಎಲೆಕ್ಷನ್ ನಿಂದಲೂ ಕಾಂಗ್ರೆಸ್ ಸೇರಲು ತೆರೆಮರೆ ಸರ್ಕಸ್ ಕೂಡ ನಡೆಸಿದ್ರು. ಈಗ ಡಿಕೆ ಬಲೆಗೆ ಬೀಳ್ತಾರಾ..? ಅಥವಾ ಕುಮಾರಣ್ಣನ ಹಿಂದೆಯೇ ಹೋಗ್ತಾರಾ ಅನ್ನೋ ಕುತೂಹಲ ರಾಜ್ಯ ರಾಜಕಾರಣದಲ್ಲಿ ಕುತೂಹಲವನ್ನುಂಟು ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ