ಕಾಂಗ್ರೆಸ್ ಸರ್ಕಾರ ವಜಾ ಮಾಡಬೇಕು- ಆರ್ ಅಶೋಕ್

ಮಂಗಳವಾರ, 17 ಅಕ್ಟೋಬರ್ 2023 (13:25 IST)
ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ.ಸರ್ಕಾರ ಬಂದು 4 ತಿಂಗಳಾದ್ರೂ ಕಂಟ್ರಾಕ್ಟರ್‌ಗಳಿಗೆ ಹಣ ಬಿಡುಗಡೆ ಮಾಡಿರಲಿಲ್ಲ.ತನಿಖೆ ಮಾಡುತ್ತೇವೆ,ಆಮೇಲೆ ಹಣ ಬಿಡುಗಡೆ ಮಾಡುತ್ತೇವೆ ಅಂತ ಪುಂಖಾನುಪುಂಖವಾಗಿ ಹೇಳಿದ್ರು.ಆದ್ರೆ ಹಣ ಬಿಡುಗಡೆ ಮಾಡದೆ ಇದ್ದಿದಕ್ಕೆ ಕಾರಣ ಅದಲ್ಲ.ಆಗ ಹಣ ಬಿಡುಗಡೆ ಮಾಡಿದ್ರೆ ಪಂಚರಾಜ್ಯ ಚುನಾವಣೆಗೆ ಹಣ ಕೊಡೋದಕ್ಕೆ ಆಗಲ್ಲ.ತೆಲಂಗಾಣ, ಮಧ್ಯಪ್ರದೇಶವನ್ನು ಕರ್ನಾಟಕ ದತ್ತು ತೆಗೆದುಕೊಂಡಿದೆ.ಎರಡು ಕಡೆ ಎರಡು ಟೀಂ ಇದೆ,ಅಲ್ಲಿಗೆ ಹಣ ಹೋಗ್ತಿದೆ.ಸ್ವತಃ ಆಂಧ್ರದ ಸಚಿವರು ಹೇಳಿದ್ರು ಈ ಹಣ ನಮ್ಮ ರಾಜ್ಯಕ್ಕೆ ಬರುತ್ತೆ ಅಂತ ಸುಳಿವು ಸಿಕ್ಕಿತ್ತು,ಬಂದಿದ್ರೆ ನಾವು ಹಿಡಿತಿದ್ವಿ ಅಂತ ಈ ನೀಚ ಸರ್ಕಾರದ ವಿರುದ್ದ ನಮ್ಮ ಹೋರಾಟ ನಡೆಯುತ್ತಿದೆ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ರು.
 
ಬಂದ 4 ತಿಂಗಳಲ್ಲೇ ಇಷ್ಟು ಭ್ರಷ್ಟಾಚಾರ ಮಾಡಿ ರೆಡ್ ಆಂಡ್ ಆಗಿ ಸಿಕ್ಕಿಕೊಂಡಿರುವ ಸರ್ಕಾರ ಇನ್ನೊಂದಿಲ್ಲ.ಕೂಡಲೇ ರಾಜ್ಯಪಾಲರು ಸರ್ಕಾರವನ್ನ ವಜಾ ಮಾಡಬೇಕು ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ