ಕಾಂಗ್ರೆಸ್ ಕಾಳಧನಿಕರು, ಭ್ರಷ್ಟಾಚಾರಿಗಳ ಪರವಾಗಿದೆ: ಸಿ.ಟಿ.ರವಿ ವಾಗ್ದಾಳಿ

ಶುಕ್ರವಾರ, 13 ಜನವರಿ 2017 (12:32 IST)
ಕಾಂಗ್ರೆಸ್ ಸರಕಾರ ಕಾಳಧನಿಕರು ಹಾಗೂ ಭ್ರಷ್ಟಾಚಾರಿಗಳ ಪರವಾಗಿದೆ ಎಂದು ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷ 3 ಲಕ್ಷ ಕೋಟಿ ರೂಪಾಯಿಯಷ್ಟು ಚಿನ್ನ ಖರೀದಿಸುವ ದೇಶ ನಮ್ಮದು. ಆದರೆ, ಸರಕಾರಕ್ಕೆ ಕೇವಲ 10 ಪ್ರತಿಶತದಷ್ಟು ತೆರಿಗೆ ರೂಪದಲ್ಲಿ ಸಂದಾಯವಾಗುತ್ತಿದೆ. ಉಳಿದ 90 ಪ್ರತಿಶತದಷ್ಟು ಹಣ ಬ್ಲ್ಯಾಕ್‌ ಮನಿಯಾಗಿ ಪರಿವರ್ತನೆ ಆಗುತ್ತದೆ ಎಂದು ಆರೋಪಿಸಿದರು. 
 
ಕಪ್ಪು ಹಣ, ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೋಟ್ ಬ್ಯಾನ್‌ನಂತಹ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ಕೆಲ ಕಳ್ಳರು ನೋಟ್‌ ಬ್ಯಾನ್ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಕಾಳಧನಿಕರು ಹಾಗೂ ಭ್ರಷ್ಟಾಚಾರಿಗಳ ಪರವಾಗಿದೆ ಎಂದು ಕಿಡಿಕಾರಿದರು. 
 
ಸಾಕಷ್ಟು ವಿರೋಧದ ನಡುವೆ ರಾಜ್ಯ ಸರಕಾರ ಸ್ಟೀಲ್ ಬ್ರಿಡ್ಜ್‌ ನಿರ್ಮಾಣಕ್ಕೆ ಮುಂದಾಗಿದೆ. ಸ್ಟೀಲ್ ಬ್ರಿಡ್ಜ್ ಕಾಮಕಾರಿ ಹೆಸರಿನಲ್ಲಿ ಹಲವರಿಗೆ ಕಿಕ್‌ಬ್ಯಾಕ್ ಸಿಗತ್ತೆ ಎಂದು ಶಾಸಕ ಸಿ.ಟಿ.ರವಿ ಗಂಭೀರವಾಗಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ