ಕಾಂಗ್ರೆಸ್ ನಕಲಿ ಜಾತ್ಯಾತೀತ ಪಕ್ಷ: ಗೋವಿಂದ್ ಕಾರಜೋಳ

ಮಂಗಳವಾರ, 18 ಅಕ್ಟೋಬರ್ 2016 (19:15 IST)
ಕಾಂಗ್ರೆಸ್ ನಕಲಿ ಜಾತ್ಯಾತೀತ ಪಕ್ಷ. ಕೇವಲ ವೋಟ್ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾಂತರು, ಹಿಂದಳಿದ ವರ್ಗ ಹಾಗೂ ದಲಿತರ ಮೂಗಿಗೆ ತುಪ್ಪ ಸವರುತ್ತ ಬಂದಿದೆ ಎಂದು ಮಾಜಿ ಸಚಿವ ಗೋವಿಂದ್ ಕಾರಜೋಳ ಕಿಡಿಕಾರಿದ್ದಾರೆ.
 
ಬೆಂಗಳೂರು ನಗರ ಜಿಲ್ಲಾ ಎಸ್‌ಸಿ-ಎಸ್‌ಟಿ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಕೋಮು ಭಾವನೆ ಕೆರಳಿಸಿ ಧರ್ಮಗಳ ಮಧ್ಯ ಒಡಕು ಉಂಟು ಮಾಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎಂದು ಲೇವಡಿ ಮಾಡಿದರು. 
 
ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಯಾರಾದರು ಉದ್ಧಾರವಾಗಿದ್ದಾರೆಂದರೆ ಅದು ಕಾಂಗ್ರೆಸ್ ಮಾತ್ರ. ದೀನದಲಿತರು ಹೆಸರು ಬಳಸಿಕೊಂಡು ಅಧಿಕಾರಕ್ಕೆ ಬರುವ ಇವರು, ಈ ಸಮುದಾಯದ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು. 
 
ಇಂದಿರಾ ಗಾಂಧಿ ಬಡವರ ತಾಯಿಯಲ್ಲ. ಅವರು ವೋಟಿನ ತಾಯಿ ಅಂತಾ ಈಗ ಎಲ್ಲರಿಗೂ ಅರಿವಾಗಿದೆ. ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಪಕ್ಷ ತೊರೆಯುವ ಮೂಲಕ ಕಾಂಗ್ರೆಸ್ ಪಕ್ಷದ ನಿಜ ಬಣ್ಣ ಬಯಲಾಗಿದೆ ಎಂದು ಮಾಜಿ ಸಚಿವ ಗೋವಿಂದ್ ಕಾರಜೋಳ ಆರೋಪಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ