ಬೆಂಗಳೂರು: ರಾಜ್ಯದ ಕಾಂಗ್ರೆಸ್ ಶಾಸಕರು, ಸಚಿವರ ಜೊತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ನಡೆಸುತ್ತಿರುವ ಮೀಟಿಂಗ್ ಬಗ್ಗೆ ಕಾಂಗ್ರೆಸ್ ನೊಳಗೇ ಅಸಮಾಧಾನ ಕೇಳಿಬಂದಿದೆ.
ನಿನ್ನೆಯವರೆಗೆ ಮೂರು ದಿನಗಳ ಕಾಲ ಸಚಿವರ ಜೊತೆ ರಣದೀಪ್ ಸಿಂಗ್ ಸಭೆ ನಡೆಸಿದ್ದರು. ಇದಕ್ಕೆ ಮೊದಲು ಶಾಸಕರ ಸಭೆ ನಡೆಸಿ ಅವರಿಂದ ಅಹವಾಲುಗಳನ್ನು ಸ್ವೀಕರಿಸಿದ್ದರು. ಆದರೆ ಈ ಸಭೆ ಬಗ್ಗೆ ಕಾಂಗ್ರೆಸ್ ನೊಳಗೇ ಅಸಮಾಧಾನವಿದೆ.
ರಣದೀಪ್ ಸುರ್ಜೇವಾಲ ಇಲ್ಲಿ ಹಲವು ದಿನ ಇದ್ದು ಮ್ಯಾರಥಾನ್ ಮೀಟಿಂಗ್ ನಡೆಸುತ್ತಿರುವುದರ ಬಗ್ಗೆ ಕೆಎನ್ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುರ್ಜೇವಾಲ ಆಂಧ್ರದಲ್ಲಿ ಕೇವಲ ಒಂದು ದಿನ ಸಭೆ ನಡೆಸಿ ಹೋಗಿದ್ದಾರೆ. ಇಲ್ಲಿ ಹಲವು ದಿನಗಳಿಂದ ಮೀಟಿಂಗ್ ನಡೆಸುವ ಅಗತ್ಯವಿರಲಿಲ್ಲ ಎಂದಿದ್ದಾರೆ.
ಇನ್ನು ಎಂಎಲ್ ಸಿ ರಾಜೇಂದ್ರ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಸಮಸ್ಯೆಗಳೇನಾದರೂ ಇದ್ದರೆ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಕೇಳುವುದು ಪದ್ಧತಿ. ಆದರೆ ಈಗ ರಣದೀಪ್ ಸಭೆ ನಡೆಸಿದ್ದಾರೆ. ಅನುದಾನವನ್ನೂ ಅವರೇ ಕೊಡ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.