ಕೈ ನಾಯಕಿ ಸೋನಿಯಾಗಾಂಧಿಗೆ ಇಡಿ ನೋಟಿಸ್ ನೀಡಿರುವುದನ್ನ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸಿದ್ದಾರೆ. ಇನ್ನು ಸ್ಥಳದಲ್ಲಿ ಯಾವುದೇ ರೀತಿಯಅಹಿತಕರ ಘಟನೆ ನಡೆಯದಂತೆ ಖಾಕಿ ಕಣ್ಗಾವಲಿದ್ದು,ಭದ್ರತೆಗಾಗಿ 5 ಜನ ಎಸಿಪಿ,15 ಜನ ಇನ್ಸ್ ಪೆಕ್ಟರ್ ನೇಮಕಮಾಡಲಾಗಿದೆ.ಇನ್ನು
30 ಜನ ಪಿಎಸ್ಐ,600 ಜನ ಸಿಬ್ಬಂದಿ ಸೇರಿದಂತೆ 5 ಕೆಎಸ್ ಆರ್ ಪಿ ತುಕಡಿ ನಿಯೋಜನೆ ಕೂಡ ಮಾಡಲಾಗಿದ್ದು,
ಟ್ರಾಫಿಕ್ ನಿಂತ್ರಣಕ್ಕೆ 60 ಜನ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನ ಕೂಡ ನಿಯೋಜನೆ ಮಾಡಲಾಗಿದೆ. ಇನ್ನು ಕಾಂಗ್ರೆಸ್ ಕಾರ್ಯಕರ್ತತರ ಧರಣಿ ತೀವ್ರ ಸ್ವರೂಪ ಪಡೆಯುತ್ತಿದಂತೆ ಪೊಲೀಸರು ನಿಯಂತ್ರಿಸುವ ಕೆಲಸ ಮಾಡಿದ್ದಾರೆ. ಇನ್ನು ಇದೇ ವೇಳೆ ಇಡಿ ನೋಟಿಸ್ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್ ಎಲ್ಲ ಸುಳ್ಳು ಆರೋಪಗಳು ವಿರೋಧ ಪಕ್ಷದ ಪಿತೂರಿ ಎಂದು ಕಿಡಿಕಾರಿದ್ರು.