ಮುಂದುವರೆದ ಸರ್ಕಾರಿ ನೌಕರರ ಧರಣಿ

ಭಾನುವಾರ, 25 ಡಿಸೆಂಬರ್ 2022 (19:55 IST)
ಸರ್ಕಾರಿ ನೌಕರರ ನಿವೃತ್ತಿ ಜೀವನವನ್ನು ಅಭದ್ರತೆಗೆ ತಳ್ಳುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವಂತೆ ಸರ್ಕಾರಿ ನೌಕರರ ಪ್ರತಿಭಟನೆ ಇಂದೂ ಕೂಡ ಮುಂದುವರೆಯಿತು . ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಿಯಲ್ಲಿ ಎನ್‌ಪಿಎಸ್ ರದ್ದು ಪಡಿಸುವ ವಿಷಯವು ಚುನಾವಣಾ ವಿಷಯವಾಗಿದ್ದರಿಂದ ರಾಜ್ಯದಲ್ಲಿಯೂ ಈ ಪ್ರತಿಭಟನೆ ಮಹತ್ವ ಪಡೆದುಕೊಂಡಿದೆ. ಹೊಸ ಪಿಂಚಣಿ ಯೋಜನೆಗೆ ವಿರೋಧ ಮಾಡುತ್ತಿದ್ದಾರೆ. ಇನ್ನು ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಸರ್ಕಾರಿ ನೌಕರರು ಬೀದಿಗಿಳಿದಿದ್ದು ನಮ್ಮ ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮುಂದುವರೆಸುವುದಾಗಿ ಸರ್ಕಾರದ ವಿರುದ್ದ ಕಿಡಿ ಕಾರುತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ