ಮಹಿಳಾ ಸಹೋದ್ಯೋಗಿ ಮೇಲೆ ಗುತ್ತಿಗೆ ನೌಕರನಿಂದ ಹಲ್ಲೆ

ಮಂಗಳವಾರ, 13 ಜೂನ್ 2017 (11:09 IST)
ರಾಯಚೂರು: ರಾಯಚೂರಿನ ಸಿಂಧನೂರು ನಗರ ಪಾಲಿಕೆಯಲ್ಲಿ ಸರ್ಕಾರಿ ಮಹಿಳಾ ಉದ್ಯೋಗಿ ಮೇಲೆ ಸಹೋದ್ಯೋಗಿಯೊಬ್ಬರು ಕ್ರೂರವಾಗಿ ಹೊಡೆಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
 
ಶರಣಪ್ಪ ಎಂಬವರು ನಸ್ರೀನ್ ಎಂಬುವವರಿಗೆ ತಡವಾಗಿ ಕಚೇರಿಗೆ ಕೆಲಸಕ್ಕೆ ಬಂದದ್ದಕ್ಕೆ ಹೊಡೆದಿದ್ದಾರೆ. ಸಿಂಧನೂರು ನಗರ ಪಾಲಿಕೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ನಸ್ರೀನ್, ರಂಜಾನ್ ತಿಂಗಳಾಗಿರುವುದರಿಂದ ಈಗ ಉಪವಾಸದಲ್ಲಿದ್ದಾರೆ. ರಂಜಾನ್ ಆಗಿದ್ದರಿಂದ ಬೆಳಗ್ಗೆ ಕೆಲಸಕ್ಕೆ ಬರುವುದು ತಡವಾಗಿತ್ತು. ಅಂದು ಶನಿವಾರವಾಗಿದ್ದರಿಂದ ಕಚೇರಿ ಕೆಲಸಗಳನ್ನು ಮುಗಿಸಲು ಕಡಿಮೆ ನೌಕರರು ಕಚೇರಿಯಲ್ಲಿದ್ದರು.  ಗುತ್ತಿಗೆ ಕೆಲಸ ಮಾಡುತ್ತಿರುವ ಕಂಪ್ಯೂಟರ್ ನಿರ್ವಾಹಕರಾಗಿರುವ ಶರಣಪ್ಪ ನಸ್ರೀನ್ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಕೆಲ ನಿಮಿಷಗಳು ಕಳೆದ ನಂತರ ಆತ ನಸ್ರೀನ್ ರನ್ನು ಕಾಲಿನಿಂದ ಒದೆದಿದ್ದಾರೆ. ಇದು ಸಿಸಿಟಿವಿ ಯಲ್ಲಿ ಸೆರೆಯಾಗಿದೆ.
 
ಶರಣಪ್ಪನ ಕೃತ್ಯದಿಂದ ನೊಂದ ಮಹಿಳೆ ನಸ್ರೀನ್ ಪೊಲೀಸರಿಗೆ ದೂರು ನೀಡಿದ್ದಾರೆ.ನಂತರ ಶರಣಪ್ಪನನ್ನು ಕೆಲಸದಿಂದ ವಜಾ ಮಾಡಿ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ

ವೆಬ್ದುನಿಯಾವನ್ನು ಓದಿ