‘ಪೊಲೀಸರು ಭಾಗಿಯಾಗಿದ್ರೆ ಜೈಲಿಗೆ’

ಬುಧವಾರ, 4 ಮೇ 2022 (19:49 IST)
ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಯಾರೇ ಬಾಗಿಯಾಗಿದ್ರೂ ಬಿಡೋದಿಲ್ಲ. ರಾಜಕಾರಣಿಗಳಾಗಿರಲೇ, ಪೊಲೀಸರೇ ಆದ್ರೂ ಶಿಕ್ಷೆ ತಪ್ಪೋದಿಲ್ಲ. ಪೊಲೀಸರೇ ಭಾಗಿಯಾಗಿದ್ರೆ.. ಅವರ ಯೂನಿಫಾರ್ಮ್ ಬಿಚ್ಚಿ ಜೈಲಿಗೆ ಹಾಕ್ತೀವಿ ಎಂಬುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಿದ್ಧರಾಮಯ್ಯ ಹಗರಣದ ಬಗ್ಗೆ ಆರೋಪ ಮಾಡ್ತಾ ಇದ್ದಾರೆ. ಆದ್ರೆ ಅವರ ಕಾಲದಲ್ಲೂ ಪಿಯು ಅಕ್ರಮ ಹಗರಣ ನಡೆದಿತ್ತು. ಆಗ 6 ವಿದ್ಯಾರ್ಥಿಗಳು ಆತ್ಮಹತ್ಯೆಗೂ ಶರಣಾಗಿದ್ದರು. ಅದನ್ನು ಅವರು ಮರೆತಂತಿದೆ ಎಂಬುದಾಗಿ ವಾಗ್ದಾಳಿ ನಡೆಸಿದರು. ಪ್ರತಿ ಪಕ್ಷಗಳ ಆರೋಪಗಳಲ್ಲಿ ನಿಜವಿಲ್ಲ. ಪಿಎಸ್‌ಐ ಅಕ್ರಮ ಬೆಳಕಿಗೆ ಬಂದ ಕೂಡಲೇ ಒಳ್ಳೆಯ ಸಿಐಡಿ ಟೀಂ ರಚನೆ ಮಾಡಿ, ತನಿಖೆಗೆ ನೀಡಿದ್ದೇವೆ. ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ರೂ ಕ್ರಮ ಕೈಗೊಳ್ಳಲಾಗುತ್ತದೆ. ಅದು ರಾಜಕಾರಣಿ, ಪೊಲೀಸರು ಆದ್ರೂ ಸರಿಯೇ.. ಪೊಲೀಸರೇ ಭಾಗಿಯಾಗಿದ್ದರೇ ಅದು ಸೀವಿಯರ್ ಅಫೆನ್ಸ್ ಆಗಲಿದೆ. ಅವರ ಯೂನಿಫಾರ್ಮ್ ಬಿಚ್ಚಿ, ಜೈಲಿಗೆ ಹಾಕೋದಾಗಿ ಎಚ್ಚರಿಕೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ