ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕೊರೊನಾ ಕೇಸ್ ಹೆಚ್ಚಳ ಭೀತಿ

ಸೋಮವಾರ, 2 ಆಗಸ್ಟ್ 2021 (17:54 IST)
ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕೊರೊನಾ ಕೇಸ್ ಗಳ ಸಂಖ್ಯೆ ಹೆಚ್ಚಾಗ್ತಿದೆ.. ಎರಡನೇ ಅಲೇ ಮುಗಿಸಿ ಕೊಂಚ ರಿಲೀಫ್ ಕೊಟ್ಟಿರೋ ಮಹಾಮಾರಿ ಮತ್ತೆ ಮೂರನೇ ಅಲೇ ಮೂಲಕ ಸಂಚಲನ ಸೃಷ್ಟಿಸೋಕೆ ರೆಡಿಯಾಗ್ತಿದೆ. ಹೀಗಾಗಿ ಕೊರೊನಾ ಕಂಟ್ರೋಲ್ ಗೆ ಬಿಬಿಎಂಪಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ತಿದೆ.. ಕೊರೊನಾ ಕಂಟ್ರೋಲ್ ಮಾಡೋಕೆ ಈಗ ಬಿಬಿಎಂಪಿ ಪೊಲೀಸ್ ಇಲಾಖೆ ಜೊತೆ ಸಭೆ ನಡೆಸಿ ಮಹಾಮಾರಿ ತೊಲಗಿಸೋಕೆ ಸಿದ್ಧವಾಗಿದೆ
 
ಬೆಂಗಳೂರು ನಗರದಲ್ಲಿ ಮತ್ತೆ ಕೊರೊನಾ ಹೆಚ್ಚಾಗ್ತಿದೆ. ಎರಡನೇ ಅಲೆ ಮುಗಿಸಿ ಸಹಜ ಸ್ಥಿತಿಗೆ ಮರಳಿ ಇನ್ನೂ ಮೂರು ತಿಂಗಳಾಗಿಲ್ಲ ಮೂರನೇ ಅಲೆ ಅಪ್ಪಳಿಸೋಕೆ ಶುರುಮಾಡಿದೆ.. ಈಗಾಗಲೇ ಅಕ್ಕ-ಪಕ್ಕದ ರಾಜ್ಯಗಳಾದ ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಮೂರನೇ ಅಲೆ ಸೌಂಡ್ ಮಾಡ್ತಿದ್ದು ನಮ್ಮ ರಾಜ್ಯದಲ್ಲೂ ಮೂರನೇ ಅಲೆ ಭೀತಿ ಹೆಚ್ಚಾಗ್ತಿದೆ. ಈ ತಿಂಗಳ ಎಂಡ್ ಬರೋವಷ್ಟರಲ್ಲಿ ಮೂರನೇ ಅಲೇ ಆರ್ಭಟ ನಮ್ಮ ರಾಜ್ಯದಲ್ಲೂ ಜೋರಾಗಲಿದೆ. ಹೀಗಾಗಿ 3rd ವೇವ್ ಕಂಟ್ರೋಲ್ ಮಾಡೋಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದ್ದು, ಈಗ ಪೊಲೀಸ್ ಇಲಾಖೆ ಸಹಾಯದೊಂದಿಗೆ ಕೊರೊನಾ ತಡೆಗಟ್ಟೋಕೆ ಮುಂದಾಗಿದೆ.. ಇಂದು ಪೊಲೀಸ್ ಕಮಿಷನರ್ ಹಾಗೂ ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳ ಜೊತೆ ಬಿಬಿಎಂಪಿ ಜಿಲ್ಲಾಡಳಿತ ಸಭೆ ನಡೆಸಿದ್ದು, ಕೊರೊನಾ ತಡೆಗಟ್ಟೋಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ.ಇನ್ನು ಸಭೆಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್, ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ.. ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಸೇರಿದಂತೆ ಹಲವರು ಭಾಗಿಯಾಗಿದ್ರು.. ಅಲ್ಲದೇ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲಿಕೆಯ ಎಲ್ಲಾ ಜಂಟಿ ಆಯುಕ್ತರು ಮತ್ತು ಡಿಸಿಪಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳು ಭಾಗಿಯಾಗಿದ್ರು.. ಈ ವೇಳೆ ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ‌ ಬಗ್ಗೆ ಪೊಲೀಸ್ ಇಲಾಖೆ ಸಹಾಯ ಕೋರಿ ಜಿಲ್ಲಾಧಿಕಾರಿ ಮಂಜುನಾಥ್ ಕಮಿಷನರ್ ಜೊತೆ ಮಾತನಾಡಿದ್ರು.. ಇನ್ನು ಮೀಟಿಂಗ್ ನಂತರ ಮಾತನಾಡಿದ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ.. ನಗರದಲ್ಲಿನ ಮೂರನೇ ಅಲೆಯ ಕೊರೊನಾ ಹೆಚ್ಚಳ  ಎರಡನೇ ಅಲೆಗೆ  ಹೋಲಿಸಿದ್ರೆ ಕೊಂಚ ಕಮ್ಮಿಯೇ ಇದೆ.. ದಿನಕ್ಕೆ 500ಕೇಸ್ ಗಳು ಮಾತ್ರ ಹೆಚ್ಚಳವಾಗ್ತಿದ್ದೇವೆ.. ಸದ್ಯಕ್ಕೆ ನಾವು ಸೇಫ್ ನಲ್ಲಿದ್ದೀವಿ.. ಆದ್ರೂ ಎಚ್ಚರದಿಂದ ಇರ್ಬೇಕು ಅಂತಾ ಹೇಳಿದ್ರು.ಇನ್ನು ಇದೇ ವೇಳೆ ಹೊರ ರಾಜ್ಯದಿಂದ ಬರೋರಿಂದಲೇ ನಗರದಲ್ಲಿ ಕೊರೊನಾ ಹೈಕ್ ಆಗೋ ಸಾಧ್ಯತೆಯಿದೆ. ಹೀಗಾಗಿ ಎಲ್ಲಾ ಗಡಿಯಲ್ಲೂ ಚೆಕಿಂಗ್, ಟೆಸ್ಟಿಂಗ್ ವ್ಯವಸ್ಥೆಯನ್ನ ಮತ್ತಷ್ಟು ಇಂಕ್ರೀಸ್ ಮಾಡಿದ್ದೀವಿ.. ಪೊಲೀಸ್ ಇಲಾಖೆ ಮೂಲಕ ಎಲ್ಲಾ ಗಡಿಗಳಲ್ಲೂ ಚೆಕ್ ಪೋಸ್ಟ್ ಗಳಲ್ಲಿ ಮತ್ತಷ್ಟು ಕಠಿಣವಾಗಿ ಚೆಕ್ ಮಾಡಲಾಗ್ತಿದೆ ಅಂದ್ರು.. ಅಲ್ದೇ ಹಿರ ರಾಜ್ಯದಿಂದ ಬರೋರಿಗೆ ಆರ್ ಟಿಪಿಸಿ ರಿಪೋರ್ಟ್ ಇದ್ರೆ ಮಾತ್ರ ಎಂಟ್ರಿ ಇಲ್ಲ ಅಂದ್ರೆ ನೋ ಎಂಟ್ರಿ ಅಂತಾ ಖಡಕ್ ಆಗೇ ಹೇಳಿದ್ರು..
 
 ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಬಗ್ಗೆಯೂ ಮಾತನಾಡಿದ ಗೌರವ್ ಗುಪ್ತಾ.. ಸದ್ಯ ಮುಂಜಾಗೃತೆಗೆ ಬೇಕಾದ ವ್ಯವಸ್ಥೆಯನ್ನ ಮಾಡಿಕೊಳ್ಳಲಾಗ್ತಿದೆ.. ಕೊರೊನಾ ಹೆಚ್ಚಳವಾಗ್ತಿದ್ದಂತೆಯೇ ಕರ್ಫ್ಯೂ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುತ್ತೆ.. ಶೀಘ್ರದಲ್ಲೇ ಸಿಎಂ ಜೊತೆ ಮೀಟಿಂಗ್ ಮಾಡಿ ಆ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಅಂದ್ರು.ಒಟ್ಟಾರೆಯಾಗಿ ಕೊರೊನಾ ಮೂರನೇ ಅಲೆ ಅಪ್ಪಳಿಸೋಕೆ ರೆಡಿಯಾಗಿದೆ.. ತಜ್ಞರು ಬೇಕಾದ ವ್ಯವಸ್ತೆ ಮಾಡಿಕೊಳ್ಳಿ ಅಂತಾ ಸರ್ಕಾರವನ್ನ ಎಚ್ಚರಿಸುತ್ರಲೇ ಇದೆ.. ಸದ್ಯ ಬಿಬಿಎಂಪಿ ಎಲ್ಲಾ ಸಿದ್ಧತೆ ಮಾಡಿಕೊಳ್ತಿದ್ದೇವೆ ಅಂತಾ ಹೇಳ್ತಿದ್ದು, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೋ ಕಾದು ನೋಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ