ಈ ವ್ಯಕ್ತಿಯಿಂದ ಮಾವು ಖರೀದಿಸಿದವರಿಗೆ ಕೊರೊನಾ ಭೀತಿ

ಸೋಮವಾರ, 11 ಮೇ 2020 (21:35 IST)
ಮಾವಿನ ಹಣ್ಣು ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಕೊರೊನಾ ವೈರಸ್ ತಗುಲಿದೆ.

ಮಾವಿನ ಹಣ್ಣಿನ 25 ವರ್ಷದ ವ್ಯಾಪಾರಿಗೆ ಕೊರೋನಾ ಸೋಂಕು ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಅಂದಲಗಿ ಗ್ರಾಮದ ನಿವಾಸಿಯಾಗಿದ್ದಾನೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ವಾಜಪೇಯಿ ತಿಳಿಸಿದ್ದಾರೆ.

ಸೋಂಕಿತ ವ್ಯಕ್ತಿ ಲಾರಿ ಚಾಲಕನಾಗಿದ್ದು, ಮಾವಿನ ಹಣ್ಣಿನ ವ್ಯಾಪಾರ ಮಾಡುತ್ತಿದ್ದ. ತನ್ನ ಸಹೋದರ ಹಾಗೂ ಮೂವರು ಕ್ಲಿನರ್ ಗಳೊಂದಿಗೆ  ತನ್ನದೇ ಮಿನಿ ಲಾರಿಯಲ್ಲಿ  ಏಪ್ರಿಲ್ 23, 26, 29 ಕ್ಕೆ ಒಟ್ಟು ಮೂರು ಬಾರಿ ಮಾವಿನ ಕಾಯಿ ಲೋಡ್ ತೆಗೆದುಕೊಂಡು ಮುಂಬೈನ 'ವಾಸಿ' ಎಪಿಎಂಸಿ ಮಾರುಕಟ್ಟೆಗೆ ಹೋಗಿ ಬಂದಿದ್ದಾನೆ.

ಸೋಂಕಿತ P- 853 ವ್ಯಕ್ತಿ ಮೇ 1 ರಿಂದ 6 ರೆಗೆ ಸ್ವಗ್ರಾಮ ಅಂದಲಗಿ, ಹಾನಗಲ್ ತಾಲೂಕಿನ ಹನುಮಸಾಗರ, ಶಡಗರವಳ್ಳಿ, ಕೊಪ್ಪರಸಿಕೊಪ್ಪ, ಬೈಲವಾಳ ಸೇರಿದಂತೆ ಒಟ್ಟು 10 ಗ್ರಾಮಗಳಲ್ಲಿ ಸಂಚಾರ ಮಾಡಿದ್ದಾನೆ. ಮೇ 6 ರಂದು ಆರೋಗ್ಯಾಧಿಕಾರಿಗಳು ಸೋಂಕಿತನ ಮಾಹಿತಿ ತಿಳಿದು ಕ್ವಾರೆಂಟೈನ್ ಮಾಡಿದ್ದಾರೆ ಎಂದಿದ್ದಾರೆ.

ಸೋಂಕಿತ P- 853 ವ್ಯಕ್ತಿಯ ಪ್ರಾಥಮಿಕ ಸಂಪಕರ್ದಲ್ಲಿ 16 ಜನರನ್ನು ಗುರುತಿಸಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ದ್ವಿತೀಯ ಸಂಪಕರ್ದಲ್ಲಿ 23 ಜನರನ್ನು ಗುರುತಿಸಿ ಗೃಹ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ ಎಂದಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ