ಈ ಜಿಲ್ಲೆಯಲ್ಲಿ ಕೊರೊನಾ ಕೇಸ್ ಬರೋಬ್ಬರಿ 100

ಮಂಗಳವಾರ, 7 ಜುಲೈ 2020 (19:42 IST)
ಡೆಡ್ಲಿ ಕೊರೊನಾ ಅಟ್ಟಹಾಸ ರಾಜ್ಯದಲ್ಲಿ ಮುಂದುವರಿದಿರುವಂತೆ ಈ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಶತಕಕ್ಕೆ ತಲುಪಿದೆ.

 ಚಿಕ್ಕಮಗಳೂರು ಜಿಲ್ಲೆಯಲ್ಲಿ 6 ಹೊಸ  ಕೊರೊನಾ  ಸೋಂಕು ಕೇಸ್  ಪತ್ತೆಯಾಗುವುದರೊಂದಿಗೆ ಒಟ್ಟು  ಜಿಲ್ಲೆಯ ಇದುವರೆಗಿನ  ಸೋಂಕಿತರ  ಸಂಖ್ಯೆ  100 ಕ್ಕೆ  ಏರಿಕೆಯಾದಂತಾಗಿದೆ.

ಚಿಕ್ಕಮಗಳೂರು  ತಾಲ್ಲೂಕಿನಲ್ಲಿ 5, ಮೂಡಿಗೆರೆ ತಾಲ್ಲೂಕಿನಲ್ಲಿ 1 ಹೊಸ  ಸೋಂಕು  ಪ್ರಕರಣ ಪತ್ತೆಯಾಗಿದೆ.

48 ಸಕ್ರಿಯ  ಪ್ರಕರಣಗಳು ಇದ್ದು,  ಸೋಂಕು ಕಾಣಿಸಿಕೊಂಡವರನ್ನು  ಕೋವಿಡ್ ನಿಗದಿತ  ಆಸ್ಪತ್ರೆಗೆ  ದಾಖಲು  ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ