ಕೊರೋನಾ ಮೂರನೇ ಅಲೆ ಅಪಾಯದಲ್ಲಿ ಕರ್ನಾಟಕ

ಗುರುವಾರ, 15 ಜುಲೈ 2021 (11:16 IST)
ಬೆಂಗಳೂರು: ಕೊರೋನಾ ಎರಡನೇ ಅಲೆ ಮುಗಿಯಿತು ಎಂದು ಓಡಾಡುತ್ತಿದ್ದ ಜನಕ್ಕೆ ಈಗ ಶಾಕ್ ಕಾದಿದೆ. ಕಳೆದ ಎರಡು-ಮೂರು ದಿನಗಳಿಂದ ಕೊರೋನಾ ಪ್ರಕರಣಗಳಲ್ಲಿ ಕೊಂಚ ಕೊಂಚವೇ ಏರಿಕೆ ಕಂಡುಬರುತ್ತಿದೆ.


ಇದು ಮೂರನೇ ಅಲೆಯ ಸೂಚನೆ ಎಂದೇ ಹೇಳಲಾಗಿದೆ. ಇದೀಗ ಕೊರೋನಾ ಪ್ರಕರಣದ ಸಂಖ್ಯೆ ಎರಡು ಸಾವಿರ ಗಡಿ ತಲುಪುತ್ತಿದೆ. ಇದು ಎಚ್ಚರಿಕೆಯ ಕರೆಗಂಟೆ.

ಒಂದು ವೇಳೆ ಮೂರು ಸಾವಿರಕ್ಕಿಂತ ಅಧಿಕ ಪ್ರಕರಣಗಳು ಕಂಡುಬಂದರೆ ಅದು ಮೂರನೇ ಅಲೆಯ ಸೂಚನೆ ಎಂದೇ ಪರಿಗಣಿಸಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಹೀಗಾಗಿ ಜನ ಇನ್ನಷ್ಟು ಮೈಮರೆತು ಓಡಾಡಿದರೆ ಮೂರನೇ ಅಲೆ ಬರುವುದನ್ನು ತಪ್ಪಿಸಲಾಗದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ