ಕೊರೊನಾ ಆತಂಕ ಶಾಲಾ ಕಾಲೇಜುಗಳಲ್ಲಿ ಹೆಚ್ಚಳ

ಸೋಮವಾರ, 6 ಡಿಸೆಂಬರ್ 2021 (15:43 IST)
ಕೊರೊನಾ ರಾಜ್ಯ ಸೇರಿದಂತೆ ದೇಶದಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ. ಕೆಲವು ಶಾಲೆ, ಕಾಲೇಜುಗಳಲ್ಲಿಯೂ ಸೋಂಕು ಹೆಚ್ಚಳವಾಗುತ್ತಿದೆ. ಇದು ಸಹಜವಾಗಿಯೇ ಸರ್ಕಾರಕ್ಕೂ ಆತಂಕ ತಂದಿದೆ.
 
ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಕೆಲವು ಶಾಲೆ, ಕಾಲೇಜುಗಳಲ್ಲಿ ಕೋವಿಡ್ ಸೋಂಕು ಹೆಚ್ಚಳ ಆತಂಕ ತಂದಿದೆ ಎಂದು ಹೇಳಿದ್ದಾರೆ.ಸೋಂಕು ಹೆಚ್ಚಳ ಸ್ವಲ್ಪ ಆತಂಕ ತಂದಿದೆ. ಸೋಂಕು ಕಂಡು ಬಂದಿರುವುದು ವಸತಿ ಶಾಲೆಗಳಲ್ಲಿ ಮತ್ತು ನವೋದಯ ಶಾಲೆಗಳಲ್ಲಿ ಎಂದಿದ್ದಾರೆ.
 
ಶಾಲಾ ಮಟ್ಟದಲ್ಲಿ 1 ರಿಂದ 10 ನೆ ತರಗತಿವರಗೆ ಸರ್ಕಾರಿ ಸರ್ಕಾರಿ ಶಾಲೆಗಳಲ್ಲಿ ಸೋಂಕಿಲ್ಲ. ವಸತಿ ಮತ್ತು ನವೋದಯ ಶಾಲೆಗಳಲ್ಲಿ ಸೋಂಕು ಹಿನ್ನೆಲೆ ಅಗತ್ಯ ಕ್ರಮ ತಗೆದುಕೊಳ್ಳುತೇವೆ. ಮಕ್ಕಳಿಗೆ ತೊಂದರೆ ಆಗಿಲ್ಲ, ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಹೇಳಿದ್ದಾರೆ.
 
ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ಕಠಿಣವಾಗಿ ಪಾಲಿಸುತ್ತೇವೆ. ನೀತಿ ಸಂಹಿತೆ ಮುಗಿದ ಬಳಿಕ ನಾನು ಸೋಂಕಿತ ವಸತಿ ಮತ್ತು ನವೋದಯ ಶಾಲೆಗಳಿಗೆ ಭೇಟಿ ಕೊಡುತ್ತೇನೆ. ವಸತಿ ಶಾಲೆಗಳಲ್ಲಿ ಎಸ್.ಓ.ಪಿ ಪಾಲನೆ ಆಗ್ತಿದೆಯಾ, ಇಲ್ಲವಾ? ಎಂಬುವುದನ್ನು ಸ್ವತಃ ಜಿಲ್ಲಾಧಿಕಾರಿಗಳಿಗೆ ಪರಿಶೀಲಿಸುವಂತೆ ಹೇಳಲಾಗಿದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ