ರಾಜ್ಯದಲ್ಲಿ ನಾಳೆಯೇ ಲಸಿಕೆ ಸಿಗೋದು ಅನುಮಾನ

ಶುಕ್ರವಾರ, 30 ಏಪ್ರಿಲ್ 2021 (09:23 IST)
ಬೆಂಗಳೂರು: ಕೇಂದ್ರ ಸರ್ಕಾರವೇನೋ ನಾಳೆಯಿಂದ ದೇಶದಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಾಗಿ ಘೋಷಣೆ ಮಾಡಿದೆ. ಆದರೆ ರಾಜ್ಯದಲ್ಲಿ ಇದು ನಾಳೆಯಿಂದಲೇ ಆರಂಭವಾಗುವುದು ಅನುಮಾನ.


ಎಲ್ಲರಿಗೂ ಕೊಡುವಷ್ಟು ಲಸಿಕೆ ದಾಸ್ತಾನು ಇರದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಹೀಗಾಗಿ ಇನ್ನೂ ಎರಡು ವಾರ ಕಳೆದ ಬಳಿಕವಷ್ಟೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸಿಗಲಿದೆ. ಈಗ ಸದ್ಯಕ್ಕೆ ನೋಂದಣಿಯಲ್ಲೂ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ತೋರಿಸುತ್ತಿದೆ.

ರಾಜ್ಯದಲ್ಲಿ ಈಗ 8 ಲಕ್ಷ ಡೋಸ್ ಲಸಿಕೆ ಮಾತ್ರವೇ ಇದೆ. ಲಸಿಕೆ ಕೊರತೆ ಇರುವ ಇತರ ರಾಜ್ಯಗಳೂ ನಾಳೆಯಿಂದಲೇ 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಲಸಿಕೆ ನೀಡುವುದು ಅನುಮಾನವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ