ಕೊರೊನಾ ವಾರಿಯರ್ಸ್ ಗೆ ಸ್ಥಳದಲ್ಲೇ ಸನ್ಮಾನ: 5 ಕೃತಜ್ಞಾ 5 ವಾಹನಗಳಿಗೆ ಚಾಲನೆ

ಸೋಮವಾರ, 19 ಜುಲೈ 2021 (15:05 IST)
ಬೆಂಗಳೂರು: ಕೊರೊನಾ ಸೋಂಕು ವಿರುದ್ಧ ಹೋರಾಟದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ ಆರೋಗ್ಯ ಕ್ಷೇತ್ರದ ಅಧಿಕಾರಿಗಳನ್ನು ಸ್ಥಳದಲ್ಲೇ ಸನ್ಮಾನಿಸುವ ಕೃತಜ್ಞಾ ವಾಹನಗಳಿಗೆ ನಟ ರಮೇಶ್ ಅರವಿಂದ್ ಚಾಲನೆ ನೀಡಿದರು.
ವೈದ್ಯರು, ದಾದಿಯರು ಸೇರಿದಂತೆ ಆರೋಗ್ಯ ಕ್ಷೇತ್ರದ ವೃತ್ತಿಪರರು ಕೊರೊನಾ ಸಂದರ್ಭದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಇವರನ್ನು ಗುರುತಿಸುವ, ಸನ್ಮಾನಿಸುವ  ಉದ್ದೇಶದಿಂದ ಕಾವೇರಿ ಆಸ್ಪತ್ರೆಯಿಂದ 'ಕೃತಜ್ಞಾ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ನಗರದ 300ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಕಾವೇರಿ ಆಸ್ಪತ್ರೆಯ ತಂಡವರು ಜುಲೈ 18 ರಿಂದ 5 ವಾಹನಗಳಲ್ಲಿ ತೆರಳಿ, ಅಲ್ಲಿ ನಿಸ್ವಾರ್ಥ ಸೇವ ಸಲ್ಲಿಸುತ್ತಿರುವ ವೈದ್ಯರು, ದಾದಿಯರು, ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳನ್ನು ಗುರುತಿಸಿ ಸ್ಥಳದಲ್ಲೇ ಸನ್ಮಾನಿಸಲಾಗುತ್ತದೆ. ಈ ಐದು ಕೃತಜ್ಞಾ ವಾಹನಗಳು 12 ದಿನಗಳ ಕಾಲ ಎಲ್ಲ ಆಸ್ಪತ್ರೆಗಳಿಗೂ ಸಂಚರಿಸಲಿವೆ.
ಹಾಗೂ ಕಾವೇರಿ ಆಸ್ಪತ್ರೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ವಿಜಯ ಭಾಸ್ಕರ್ ಮಾತನಾಡಿ, ವಿಶ್ವಾದ್ಯಂತ ಕಳೆದ 18 ತಿಂಗಳಿಂದ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಆರೋಗ್ಯ ಕ್ಷೇತ್ರದ ಸಿಬ್ಬಂದಿ ಹಗಲಿರುವ ಜನರ ಪ್ರಾಣ ರಕ್ಷಿಸುವ ಸೇವೆಯಲ್ಲಿ ನಿರತರಾಗಿದ್ದಾರೆ. ಇವರಿಗೆ ಯಾವುದೇ ಪ್ರಶಸ್ತಿ-ಗೌರವಗಳು ಸರಿಸಮವಾಗುವುದಿಲ್ಲ. ಆದರೂ, ನಮ್ಮ ಆಸ್ಪತ್ರೆಯಿಂದ ಆರೋಗ್ಯ ವೃತ್ತಿಪರರಿಗೆ ಸ್ಫೂರ್ತಿ
ನೀಡಲು ಹಾಗೂ ಅವರಿಗೆ ಧನ್ಯವಾದ ಅರ್ಪಿಸಲು ಜುಲೈ 21 ರಂದು ಕೃತಜ್ಞಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರ ಭಾಗವಾಗಿ ಜುಲೈ 18ರಿಂದ ಆರೋಗ್ಯ ಕಾರ್ಯತ್ರರನ್ನು ಗುರುತಿಸಿ ಸನ್ಮಾನಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ನಟ ರಮೇಶ್ ಅರವಿಂದ್ ಮಾತನಾಡಿ, ಆರೋಗ್ಯ ಕಾರ್ಯಕರ್ತರನ್ನು ಗುರುತಿಸಿ, ಸನ್ಮಾನಿಸುತ್ತಿರುವ ಕಾವೇರಿ ಆಸ್ಪತ್ರೆಯ ಕಾರ್ಯ ಶ್ಲಾಘನೀಯ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ