ಕೊರೊನಾ ವೈರಸ್ ಮತ್ತು ನಿಫಾ ವೈರಸ್ ನೆರೆಯ ರಾಜ್ಯದಲ್ಲಿ ಹೆಚ್ಚಳ

ಸೋಮವಾರ, 13 ಸೆಪ್ಟಂಬರ್ 2021 (16:58 IST)
ಕೊರೊನಾ ವೈರಸ್ ಮತ್ತು ನಿಫಾ ವೈರಸ್ ನೆರೆಯ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳದಿಂದ ಬರುವ ವ್ಯಕ್ತಿಗಳನ್ನು ಕಣ್ಗಾವಲಿನಲ್ಲಿಡಲಾಗುವುದು ಎಂದು ಕರ್ನಾಟಕ ಸರ್ಕಾರ ಭಾನುವಾರ ಹೇಳಿದೆ. ಕೇರಳದ ಗಡಿಯಲ್ಲಿರುವ ಜಿಲ್ಲೆಗಳಲ್ಲಿಯೂ ಕಣ್ಗಾವಲು ತೀವ್ರಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 
ಸೆಪ್ಟೆಂಬರ್ ೭ ರಂದು, ರಾಜ್ಯದಲ್ಲಿ ನಿಫಾ ವೈರಸ್ ನ ಮೊದಲ ದೃಢೀಕೃತ ಪ್ರಕರಣ ವರದಿಯಾದ ನಂತರ ಕಣ್ಗಾವಲು ಮತ್ತು ಸನ್ನದ್ಧತೆಯನ್ನು ಬಲಪಡಿಸುವಂತೆ ಕರ್ನಾಟಕ ಸರ್ಕಾರ ಕೇರಳದ ಗಡಿಯಲ್ಲಿರುವ ಜಿಲ್ಲೆಗಳ ಆಡಳಿತಗಳಿಗೆ ನಿರ್ದೇಶನ ನೀಡಿತ್ತು.
 
ಜ್ವರ, ಬದಲಾದ ಮಾನಸಿಕ ಸ್ಥಿತಿ, ತೀವ್ರ ದೌರ್ಬಲ್ಯ, ತಲೆನೋವು, ಉಸಿರಾಟದ ತೊಂದರೆ, ಕೆಮ್ಮು, ವಾಂತಿ, ಸ್ನಾಯು ನೋವು, ಸೆಳೆತ ಮತ್ತು ಅತಿಸಾರದಂತಹ ಯಾವುದೇ ರೋಗಲಕ್ಷಣಗಳಿರುವ ಕೇರಳದಿಂದ ಬರುವವರ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ತಿಳಿಸಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ