ದೆಹಲಿ ನಿಜಾಮುದ್ದೀನ್ ಮಸೀದಿಯಿಂದ ಮಂಡ್ಯ ಜಿಲ್ಲೆಗೆ ವಕ್ಕರಿಸಿದ ಕೊರೊನಾ ವೈರಸ್
ಕೊರೊನಾ ವೈರಸ್ ಸೋಂಕಿತ ದೆಹಲಿಯ ನಿಜಾಮುದ್ದೀನ್ ಪ್ರಾರ್ಥನಾ ಸಭೆಯ ಲಿಂಕ್ ಮಂಡ್ಯ ಜಿಲ್ಲೆಯೊಂದಿಗೆ ಹರಡಿಕೊಂಡಿದ್ದು, ಇದೀಗ ಆ ಮೂಲಕ ಕೊರೊನಾ ವೈರಸ್ ವಕ್ಕರಿಸಿದೆ.
ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ವೈರಸ್ ಶಂಕಿತರ ಪೈಕಿ ಇನ್ನೂ 7 ಮಂದಿಯ ವರದಿ ಬರಬೇಕಾಗಿದೆ. ಧರ್ಮಗುರುಗಳ ಜೊತೆ ಒಟ್ಟು 10 ಮಂದಿ ಸಂಪರ್ಕ ಹೊಂದಿದ್ದು, ಇವರ ಜೊತೆಗೆ ಸಂಪರ್ಕ ಹೊಂದಿದ್ದ 48 ಮಂದಿಯನ್ನು ಐಸೊಲೇಷನ್ ವಾರ್ಡ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.