ಚಂದ್ರಯಾನ-3 ಉಡಾವಣೆಗೆ ಕೌಂಟ್‌ಡೌನ್‌

ಶುಕ್ರವಾರ, 14 ಜುಲೈ 2023 (14:40 IST)
ಇಡೀ ವಿಶ್ವವೇ ಭಾರತದತ್ತ ಬೆರಗುಗಣ್ಣಿನಿಂದ ನೋಡ್ತಿದೆ. ಯಾಕಂದ್ರೆ ಇತಿಹಾಸ ಸೃಷ್ಟಿಸಲು ನಮ್ಮ ಹೆಮ್ಮೆಯ ಇಸ್ರೋ ಸಜ್ಜಾಗಿ ನಿಂತಿದೆ.ಇಂದು ಶ್ರೀಹರಿಕೋಟದಿಂದ ಚಂದ್ರಯಾನ-3 ಉಡಾವಣೆ ಆಗಲಿದೆ. ಮಧ್ಯಾಹ್ನ 2:35 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-III ಉಡಾವಣಾ ವಾಹನ ಮೂಲಕ ಚಂದ್ರಯಾನ ಉಡಾವಣೆ ಆಗಲಿದೆ. ಇದಕ್ಕಾಗಿ ಇಸ್ರೋ ವಿಜ್ಞಾನಿಗಳು ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಚಂದ್ರಯಾನ-3 ಪ್ರಯೋಗ ಯಶಸ್ವಿಯಾಗಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಈ ಮಹತ್ವದ ಉಡಾವಣೆಯನ್ನು ವೀಕ್ಷಿಸಲು ಹಲವಾರು ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ