ಅರ್ಜುನ್ ಸರ್ಜಾ-ಶೃತಿ ಹರಿಹರನ್ ಭವಿಷ್ಯ ಇಂದು ನಿರ್ಧಾರ
ಶೃತಿ ವಿರುದ್ಧ 5 ಕೋಟಿ ರೂ.ಗಳ ಮಾನಹಾನಿ ಮತ್ತು ಸಾರ್ವಜನಿಕ ಹೇಳಿಕೆ ನೀಡದಂತೆ ನಿರ್ಬಂಧ ಹೇರುವಂತೆ ಕೋರಿ ಅರ್ಜುನ್ ಸರ್ಜಾ ಪರ ಅಳಿಯ ಧ್ರುವ ಸರ್ಜಾ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿರುವ ನ್ಯಾಯಾಲಯ ಇಂದಿಗೆ ವಿಚಾರಣೆ ಮುಂದೂಡಿದೆ.
ಸೋಮವಾರ ಮೇಯೋಹಾಲ್ ನ ಎಸಿಸಿಎಂಎಂ ನ್ಯಾಯಾಲಯಕ್ಕೆ 14 ಪುಟಗಳ ವಾದ ಮಂಡಿಸಿದ್ದ ಶೃತಿ ಪರ ವಕೀಲರು ತಮ್ಮ ಕಕ್ಷಿದಾರರಿಗೆ ಈ ಪ್ರಕರಣ ಸಂಬಂಧ ಅನೇಕ ಬೆದರಿಕೆ ಕರೆಗಳು, ಅವಹೇಳನಕಾರಿ ಪೋಸ್ಟ್ ಗಳು ಬರುತ್ತಿವೆ ಎಂದಿದ್ದಾರೆ. ಈ ನಡುವೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಭೇಟಿ ನಿಡಿದ ಶೃತಿ ಪರ ವಕೀಲರು ಅರ್ಜುನ್ ಸರ್ಜಾರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.